

ಹೊಸನಗರ: ಕರಿಮನೆ ಗ್ರಾಪಂ ನೂತನ ಅಧ್ಯಕ್ಷರಾಗಿ ದೇವಮ್ಮ ಗೋಪಾಲ್, ಉಪಾಧ್ಯಕ್ಷರಾಗಿ ಎಚ್.ಟಿ.ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರಿಮನೆ ಗ್ರಾಪಂ 6 ಸದಸ್ಯ ಬಲ ಹೊಂದಿದ್ದು ಕಾಂಗ್ರೆಸ್ ಬೆಂಬಲಿತ 5 ಹಾಗೂ ಬಿಜೆಪಿ ಬೆಂಬಲಿತ ಓರ್ವ ಸದಸ್ಯರಿದ್ದಾರೆ. ಸದಸ್ಯೆ ಅಶ್ವಿನಿ ಪಟೇಲ್, ನಾಗರತ್ನಾ ಚುನಾವಣಾ ಪ್ರಕ್ರಿಯೆಗೆ ಗೈರಾಗಿದ್ದರು. ಬಿಸಿಎಂ ಕಲ್ಯಾಣಾಧಿಕಾರಿ ಎಚ್.ಆರ್.ರಾಘವೇಂದ್ರ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
ಸದಸ್ಯರಾದ ದೇವೇಂದ್ರ ನಾಯ್ಕ, ಪ್ರಕಾಶ ಮಳಲಿ ಇದ್ದರು.