

ಹೊಸನಗರ: ಹರಿದ್ರಾವತಿಯಲ್ಲಿ ಪಕ್ಷೇತರ ಸದಸ್ಯರು ಅಧ್ಯಕ್ಷ- ಉಪಾಧ್ಯಕ್ಷರಾಗುವ ಮೂಲಕ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಮುಖಭಂಗಕ್ಕೆ ಒಳಗಾಗಿದೆ.
ಹರಿದ್ರಾವತಿ ಗ್ರಾಪಂ 9 ಸದಸ್ಯ ಬಲ ಹೊಂದಿದ್ದು ಪಕ್ಷೇತರವಾಗಿ ಗುರುತಿಸಿಕೊಂಡಿರುವ ವಾಟಗೋಡು ಸುರೇಶ್ ಬೆಂಬಲಿತ 5 ಸದಸ್ಯರು, ಉಳಿದಂತೆ ಕಾಂಗ್ರೆಸ್, ಬಿಜೆಪಿ ಬೆಂಬಲಿತ ತಲಾ 2 ಸದಸ್ಯರಿದ್ದರು. ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಆರ್.ಮಂಜುನಾಥ್, ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಗುರುಮೂರ್ತಿ ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ 5 ಮತ ಪಡೆಯುವ ಮೂಲಕ ಮಂಜುನಾಥ್ ಅಧ್ಯಕ್ಷರಾಗಿ ಆಯ್ಕೆಯಾಗಿದರು. ಉಪಾಧ್ಯಕ್ಷೆ ಶ್ರೀಜಯಾ ಸುಬ್ಬರಾವ್ ಅವರು ಪೂರ್ಣಿಮಾ ಅವರನ್ನು ಪರಾಭವಗೊಳಿಸಿದರು. ಚುನಾವಣಾಧಿಕಾರಿಯಾಗಿ ಬಿಇಒ ಕೃಷ್ಣಮೂರ್ತಿ ಕಾರ್ಯನಿರ್ವಹಿಸಿದರು.