ಬಿಜೆಪಿ ತೆಕ್ಕೆಗೆ ಹೊಸಕೋಟೆ ನಗರಸಭೆ

Hoskote Municipal Council under BJP wing
Published on

ಅಧ್ಯಕ್ಷರಾಗಿ ಆಶಾರಾಜಶೇಖರ್​, ಉಪಾಧ್ಯಕ್ಷರಾಗಿ ನವೀನ್​ ಅವಿರೋಧ ಆಯ್ಕೆ

ಹೊಸಕೋಟೆ: ಹೊಸಕೋಟೆ ನಗರಸಭೆಯ ನೂತನ ಅಧ್ಯಕ್ಷರಾಗಿ ಬಿಜೆಪಿಯ ಆಶಾ ರಾಜಶೇಖರ್​, ಉಪಾಧ್ಯಕ್ಷರಾಗಿ ನವೀನ್​ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಶಾ ರಾಜಶೇಖರ್​, ಉಪಾಧ್ಯಕ್ಷ ಸ್ಥಾನಕ್ಕೆ ನವೀನ್​ ಅವರನ್ನು ಹೊರತುಪಡಿಸಿ ಬೇರಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾ ಅಧಿಕಾರಿ ದುರ್ಗಾಶ್ರೀ ಅವಿರೋಧ ಆಯ್ಕೆ ಘೋಷಿಸಿದರು.
ಸ್ಪರ್ಧೆಗೆ ಕಾಂಗ್ರೆಸ್​ ಹಿಂದೇಟು: ಈ ಹಿಂದೆ ಎಂಟಿಬಿ ನಾಗರಾಜ್​ ಸಚಿವರಾಗಿದ್ದ ಸಂದರ್ಭದಲ್ಲಿ ನಗರಕ್ಕೆ ಅಗತ್ಯವಾದ ಅನುದಾನಗಳನ್ನು ಸಮರ್ಪಕವಾಗಿ ಒದಗಿಸಿದ ಹಿನ್ನೆಲೆಯಲ್ಲಿ ನಗರ ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದ್ದರಿಂದಲೇ ನಗರ ಸಭೆ ವ್ಯಾಪ್ತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಪಕ್ಷದವರು ಸ್ಪರ್ಧೆ ಮಾಡದೆ ಹಿಂದೆ ಸರಿದಿದ್ದಾರೆ ಎಂದು ಸಂಸದ ಡಾ.ಕೆ.ಸುಧಾಕರ್​ ಹೇಳಿದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರು ಅಭಿವೃದ್ಧಿ ಕಾರ್ಯದಲ್ಲಿ ರಾಜಕೀಯ ಹಸ್ತೇಪ ಮಾಡದೆ ಪಾತೀತವಾಗಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ, ಹೊಸಕೋಟೆಯಲ್ಲಿ ಕಾಂಗ್ರೆಸ್​ ಆಡಳಿತ ಇದ್ದರೂ ನಗರಸಭೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಒಗ್ಗಟ್ಟಿನ ಮೂಲಕ ಅಭಿವೃದ್ಧಿ: ಹೊಸಕೋಟೆ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಒಕ್ಕಲಿಗ ಸಮುದಾಯದ ಮಹಿಳೆಗೆ ಅಧ್ಯಕ್ಷ ಸ್ಥಾನ ದಕ್ಕಿರುವುದು ಸಂತಸ ತಂದಿದೆ. ಮಾಜಿ ಸಚಿವ ಎಂಟಿಬಿ ನಾಗರಾಜ್​, ಸಂಸದ ಡಾ.ಕೆ.ಸುಧಾಕರ್​ ಆಶೀರ್ವಾದದಿಂದ ಎಲ್ಲ ಸದಸ್ಯರ ಸಹಕಾರದಿಂದ ಅವಿರೋಧ ಆಯ್ಕೆಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರನ್ನೂ ಜತೆಯಾಗಿ ಸೇರಿಸಿಕೊಂಡು ಒಗ್ಗಟ್ಟಾಗಿ ಅಭಿವೃದ್ಧಿಯತ್ತ ನಗರವನ್ನು ಕೊಂಡೊಯ್ಯುತ್ತೇನೆ ಎಂದು ನೂತನ ಅಧ್ಯೆ ಆಶಾ ರಾಜಶೇಖರ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net