ಹೊಸಕೋಟೆ ಸರ್ಕಾರಿ ಶಾಲೆ ಮಕ್ಕಳಿಗೆ ವಿಮಾನಯಾನ ಭಾಗ್ಯ

ಪ್ರವಾಸಕ್ಕೆ ಹೊರಟಿರುವ ಹೊಸಕೋಟೆ ಸರ್ಕಾರಿ ಶಾಲೆಯ ಮಕ್ಕಳು ಮತ್ತು ಎಸ್​ಡಿಎಂಸಿ ಸದಸ್ಯರು ಹಾಗೂ ಶಿಕರು ಗೃಹ ಸಚಿವ ಡಾಜಿ ಪರಮೇಶ್ವರ ಅವರನ್ನು ಶನಿವಾರ ಭೇಟಿ ಮಾಡಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಕಾಂತಪ್ಪ, ದೇಣಿಗೆ ಕೊಟ್ಟ ಶಿಕ್ಷಕ ಹರೀಶ್​ ಕುಮಾರ್​ ಸೇರಿದಂತೆ ಇತರರ ಶಿಕ್ಷಕರು ಇದ್ದರು.
ಪ್ರವಾಸಕ್ಕೆ ಹೊರಟಿರುವ ಹೊಸಕೋಟೆ ಸರ್ಕಾರಿ ಶಾಲೆಯ ಮಕ್ಕಳು ಮತ್ತು ಎಸ್​ಡಿಎಂಸಿ ಸದಸ್ಯರು ಹಾಗೂ ಶಿಕರು ಗೃಹ ಸಚಿವ ಡಾಜಿ ಪರಮೇಶ್ವರ ಅವರನ್ನು ಶನಿವಾರ ಭೇಟಿ ಮಾಡಿ ಪ್ರವಾಸದ ಬಗ್ಗೆ ಮಾಹಿತಿ ನೀಡಿದರು. ಮುಖ್ಯಶಿಕ್ಷಕ ಕಾಂತಪ್ಪ, ದೇಣಿಗೆ ಕೊಟ್ಟ ಶಿಕ್ಷಕ ಹರೀಶ್​ ಕುಮಾರ್​ ಸೇರಿದಂತೆ ಇತರರ ಶಿಕ್ಷಕರು ಇದ್ದರು.
Published on

25 ವಿದ್ಯಾರ್ಥಿಗಳಿಗೆ ಅವಕಾಶ | ವಿವಿಧ ಸ್ಥಳಗಳಿಗೆ ಭೇಟಿ

ಕೊರಟಗೆರೆ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ, ತಾಲೂಕಿನ ಹೊಸಕೋಟೆ ಸರ್ಕಾರಿ ಶಾಲೆಯೊಂದು ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ ಕರೆದೊಯ್ಯುವ ಮೂಲಕ ಎಲ್ಲರ ಗಮನ ಸೆಳೆದಿದೆ.

ತಾಲೂಕಿನ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಹೊಸಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಕ್ರಿಯ ಚಟುವಟಿಕೆಗಳ ಮೂಲಕ ಮಾದರಿಯಾಗಿದ್ದು, ಅಂತೆಯೇ ಸೋಮವಾರ (ಡಿ.16) ಶಾಲೆಯ ಮಕ್ಕಳಿಗೆ ಪ್ರವಾಸ ಭಾಗ್ಯ ಕಲ್ಪಿಸಲಾಗಿದೆ. ಶಾಲೆಯಲ್ಲಿ ಒಟ್ಟು ನಾಲ್ಕು ಜನ ಕ್ರಿಯಾಶೀಲ ಶಿಕ್ಷಕರಿದ್ದು, ಶಾಲೆಯ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 84 ಮಕ್ಕಳಿದ್ದಾರೆ. ಈಗ 6 ಮತ್ತು 7ನೇ ತರಗತಿಯ 25 ಮಕ್ಕಳಿಗೆ ವಿಮಾನ ಪ್ರವಾಸ ಭಾಗ್ಯ ಕಲ್ಪಿಸಲಾಗಿದೆ.

ಹೊಸಕೋಟೆ ಶಾಲೆ ವಿದ್ಯಾರ್ಥಿಗಳ ಪ್ರತಿಭೆ ಜತೆಗೆ ಶಿಕ್ಷಕರ ತ್ಯಾಗ ಇತರ ಶಾಲೆಗಳಿಗೆ ಮಾದರಿಯಾಗಿದೆ.

ಪ್ರವಾಸ ಹೋಗುವ ಸ್ಥಳ: ಮಕ್ಕಳಿಗೆ ಹೊಸ ಅನುಭವ ಕೊಡುವ ಉದ್ದೇಶದೊಂದಿಗೆ -2024-&25ನೇ ಸಾಲಿನ ಶೈಕ್ಷಣಿಕ ಪ್ರವಾಸ ಆಯೋಜಿಸಿದ್ದು, ವಿಮಾನದ ಮೂಲಕ ಮಂಗಳೂರಿಗೆ ತೆರಳಿ ಅಲ್ಲಿಂದ ರೈಲಿನಲ್ಲಿ ಬೆಂಗಳೂರಿಗೆ ಬರಲಿದ್ದಾರೆ. ಮಂಗಳೂರಿನ ಪಿಲಿಕುಳ ಮೃಗಾಲಯ, ಲೈಟ್​ ಹೌಸ್​, ವಿಜ್ಞಾನಕೇಂದ್ರ, ಹೆರಿಟೇಜ್​ ವಿಲೇಜ್​ ಮತ್ತು ಬೆಂಗಳೂರಿನ ವಿಧಾನಸೌಧ ಮುಂತಾದ ಸ್ಥಳಗಳನ್ನು ವೀಕ್ಷಣೆ ಮಾಡುವ ವಿಶೇಷ ಯೋಜನೆ ರೂಪಿಸಲಾಗಿದೆ.

ಗೃಹಸಚಿವರಿಂದ ನೆರವಿನ ಭರವಸೆ: ಗೃಹ ಸಚಿವ ಮತ್ತು ಶಾಸಕ ಡಾ.ಜಿ.ಪರಮೇಶ್ವರ ಶನಿವಾರ ಮಕ್ಕಳ ವಿಮಾನ ಪ್ರವಾಸದ ಬಗ್ಗೆ ಮಾಹಿತಿ ಪಡೆದು ಉತ್ತಮವಾಗಿ ಮಕ್ಕಳು ಪ್ರವಾಸ ಮಾಡಿ ಬರಲಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಶುಭಕೋರಿ ಮಕ್ಕಳ ಮತ್ತು ಶಿಕ್ಷಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಎಂದು ತಿಳಿಸಿದ್ದು, ಮಕ್ಕಳ ಶೈಕ್ಷಣಿಕ ಅನುಭವ ಹೆಚ್ಚಿಸಲು ಆರ್ಥಿಕ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಜತೆಗೆ ಶಾಲೆಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.

ನಿರಂತರ ಚಟುವಟಿಕೆಯ ಶಾಲೆ: ಈ ಶಾಲೆಯ ಮಕ್ಕಳು -2023 ಜನವರಿಯಲ್ಲಿ ಪ್ರಸ್ತುತಪಡಿಸಿದ "ದಾನ ಶೂರ ವೀರ ಕರ್ಣ' ಎಂಬ ನಾಟಕ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮಾತಾಗಿತ್ತು. ಶಾಲೆ ಗುಣಮಟ್ಟದ ಶಿಕ್ಷಣದ ಜತೆಗೆ ಭವಿಷ್ಯದ ನಿರೀೆಯಲ್ಲೂ ಪ್ರಗತಿ ಸಾಧಿಸಿದೆ. 2023-&24ನೇ ಸಾಲಿನಲ್ಲಿ ಬೇಸಿಗೆ ರಜೆಯಲ್ಲಿ ಹಮ್ಮಿಕೊಂಡಿದ್ದ ಸ್ಪೋಕನ್​ ಇಂಗ್ಲಿಷ್​ ಮತ್ತು ಕಂಪ್ಯೂಟರ್​ ತರಗತಿ ಮಕ್ಕಳಲ್ಲಿ ತಾಂತ್ರಿಕತೆ ಮತ್ತು ಭಾಷಾ ಕೌಶಲ ಅಭಿವೃದ್ಧಿಗೊಳಿಸಿತು. 3ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಈಗ ಸುಲಭವಾಗಿ ಎಂಎಸ್​ ವರ್ಡ್​, ಎಂಎಸ್​ ಪೇಯಿಂಟ್​, ಕನ್ನಡ ಮತ್ತು ಇಂಗ್ಲಿಷ್​ ಟೈಪಿಂಗ್​ ಕಲಿಯಲು ಪ್ರಮುಖ ಶಕ್ತಿಯಾದವರು ಮುಖ್ಯಶಿಕ್ಷಕ ಕಾಂತಪ್ಪ, ದೇವರಾಜ್​, ಹರೀಶ್​ ಕುಮಾರ್​ ಮತ್ತು ಮಂಜುಳಾ ಸೇರಿ ಈ ಶಾಲೆಯ ಶಿಕ್ಷಕ ವೃಂದ.

ಹೊಸಕೋಟೆ ಶಾಲೆಯಲ್ಲಿ ಮಕ್ಕಳು ಕಂಪ್ಯೂಟರ್​ ನಿರ್ವಹಣೆ ಮಾಡುತ್ತಿರುವುದನ್ನು ಪರಿಶೀಲಿಸಿದ ಶ್ರೀ ಹನುಮಂತನಾಥ ಸ್ವಾಮೀಜಿ.
ಹೊಸಕೋಟೆ ಶಾಲೆಯಲ್ಲಿ ಮಕ್ಕಳು ಕಂಪ್ಯೂಟರ್​ ನಿರ್ವಹಣೆ ಮಾಡುತ್ತಿರುವುದನ್ನು ಪರಿಶೀಲಿಸಿದ ಶ್ರೀ ಹನುಮಂತನಾಥ ಸ್ವಾಮೀಜಿ.

ನಿರಂತರವಾಗಿ ಒಂದಿಲ್ಲೊಂದು ಕಾರ್ಯ ಚಟುವಟಿಕೆಗಳೊಂದಿಗೆ ತಾಲೂಕಿಗೆ ಹೊಸಕೋಟೆ ಸರ್ಕಾರಿ ಶಾಲೆ ಮಾದರಿಯಾಗಿದೆ. ಯಾವ ರೀತಿ ಶಾಲೆ ಅಭಿವೃದ್ಧಿಪಡಿಸಬೇಕು ಎಂಬುದಕ್ಕೆ ಇಲ್ಲಿನ ಶಿಕ್ಷಕರು ಖಾಸಗಿ ಶಾಲೆಯನ್ನು ಸೆಡ್ಡು ಹೊಡೆಯುವ ರೀತಿ ಶಾಲೆಗೆ ಹೈಟೆಕ್​ ಸ್ಪರ್ಶ ನೀಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಪ್ರತಿಯೊಬ್ಬರೂ ಸರ್ಕಾರಿ ಶಾಲೆ ಶಿಕ್ಷಕರಿಗೆ ಮಾದರಿಯಾಗಿದ್ದಾರೆ. | ಶ್ರೀ ಡಾ.ಹನುಮಂತನಾಥ ಸ್ವಾಮೀಜಿ ಕುಂಚಿಟಿಗ ಮಹಾ ಸಂಸ್ಥಾನ ಮಠ, ಎಲೆರಾಂಪುರ ಬಸ್​ ಸೌಲಭ್ಯವಿಲ್ಲದ ಗ್ರಾಮದಲ್ಲಿ ನಾವೊಂದು ಹೈಟೆಕ್​ ಶಾಲೆ ನಿಮಾರ್ಣ ಮಾಡುವುದು ಕನಸಾಗಿತ್ತು. ನನ್ನ ಸಹ ಶಿಕ್ಷಕರ ಸಹಕಾರದೊಂದಿಗೆ ಶಾಲೆ ಅಭಿವೃದ್ಧಿಪಡಿಸುತ್ತಿದ್ದೇನೆ. ಶಾಲೆಯಲ್ಲಿನ ಎಲ್ಲ ಶಿಕ್ಷಕರ ಶ್ರಮ ಮತ್ತು ಎಸ್​ಡಿಎಂಸಿ ಸಹಕಾರದೊಂದಿಗೆ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. | ಕಾಂತಪ್ಪ ಮುಖ್ಯಶಿಕ್ಷಕ, ಹೊಸಕೋಟೆ ಜಿಲ್ಲೆಯ ಉತ್ತಮ ಜಿಲ್ಲಾ ಪ್ರಶಸ್ತಿ ಪುರಸತ ಮುಖ್ಯಶಿಕ್ಷಕ ಕಾಂತಪ್ಪ ಅವರು ಪ್ರಶಸ್ತಿ ಹಣವನ್ನು ಶಾಲೆ ಅಭಿವೃದ್ಧಿ ನೀಡಿದ್ದಾರೆ. ಅವರ ಪ್ರೇರಣೆಯಿಂದ ನಾನೂ ಸಹ ಮಕ್ಕಳಿಗೆ ವಿಮಾನ ಪ್ರವಾಸ ಕಲ್ಪಿಸಬೇಕು ಎಂಬ ಆಶಯದೊಂದಿಗೆ ವೈಯಕ್ತಿಕವಾಗಿ 1 ಲಕ್ಷ ರೂ. ನೀಡಿದ್ದು, ಮಕ್ಕಳಿಗೆ ಉಚಿತ ಪ್ರವಾಸ ಮಾಡಿಸುತ್ತಿದ್ದೇವೆ. ಸರ್ಕಾರಿ ಶಾಲೆ ಮಕ್ಕಳಿಗೂ ವಿಮಾನ ಭಾಗ್ಯ ಕಲ್ಪಿಸಬೇಕು ಎಂಬ ಆಶಯದೊಂದಿಗೆ ವ್ಯವಸ್ಥೆ ಮಾಡಿದ್ದೇವೆ. | ಹರೀಶ್​ ಕುಮಾರ್​ ಪ್ರವಾಸಕ್ಕೆ 1 ಲಕ್ಷ ರೂ. ದೇಣಿಗೆ ಕೊಟ್ಟ ಶಿಕ್ಷಕ, ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net