

ಸೂಲಿಬೆಲೆ : ಹೊಸಕೋಟೆ ವಿಧಾನಸಭಾ ಕ್ಷೇತ್ರವು ಪ್ರಗತಿಯತ್ತ ಸಾಗುತ್ತಿದ್ದು, ಕಾಂಗ್ರೆಸ್ನಿಂದ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ಹೇಳಿದರು. ಹೊಸಕೋಟೆ ತಾಲೂಕಿನ ಗಿಡ್ಡಪ್ಪನಹಳ್ಳಿ ಗ್ರಾಪಂ, ಕಂಬಳೀಪುರ ಹಾಗೂ ದೊಡ್ಡಹರಳಗೆರೆ ಗ್ರಾಪಂಗಳಲ್ಲಿ ಶುಕ್ರವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಹೊಸಕೋಟೆ &ಶಿಡ್ಲಟ್ಟ ರಸ್ತೆ 2 ಕೋಟಿ ರೂ.ಅನುದಾನದಲ್ಲಿ ಅಭಿವೃದ್ಧಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಗಿಡ್ಡಪ್ಪನಹಳ್ಳಿ ಗ್ರಾಪಂ ವ್ಯಾಪ್ತಿಯ ಬೆಟ್ಟಹಳ್ಳಿಯಲ್ಲಿ 10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ, ಚರಂಡಿ ಕಾಮಗಾರಿ, ಕಂಬಳೀಪುರ ಗ್ರಾಪಂ ವ್ಯಾಪ್ತಿಯ ಎಂ.ಸತ್ಯವಾರದಲ್ಲಿ 10 ಲಕ್ಷ ರೂ. ವೆಚ್ಚದ ಕಾಮಗಾರಿ, ಮುತ್ಸಂದ್ರದಲ್ಲಿ 1ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ, ಮುತ್ತುಕದಹಳ್ಳಿಯಲ್ಲಿ ಎಸ್ಸಿಪಿ ಅನುದಾನ 20 ಲಕ್ಷ ರೂ. ಹಾಗೂ ಮುಖ್ಯಮಂತ್ರಿ ವಿಶೇಷ ಅನುದಾನ 25 ಲಕ್ಷ ರೂ. ಸೇರಿ 45 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, 5 ಲಕ್ಷ ವೆಚ್ಚದಲ್ಲಿ ಹೈಮಾಸ್ಜ್ ಲೈಟ್ ಉದ್ಘಾಟನೆ, ದೊಡ್ಡಕೋಲಿಗದಲ್ಲಿ ಲೋಕೋಪಯೋಗಿ ಇಲಾಖೆ 2 ಕೋಟಿ ರೂ. ವೆಚ್ಚದ ಡಾಂಬರ್ ರಸ್ತೆ, ದೊಡ್ಡಹರಳಗೆರೆ ಗ್ರಾಪಂ ವ್ಯಾಪ್ತಿಯಲ್ಲಿ 80 ಲಕ್ಷ ರೂ. ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣ, ಭುವನಹಳ್ಳಿಯಲ್ಲಿ 25 ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ ಕಾಮಗಾರಿ, ಬಾಲೇನಹಳ್ಳಿಯಲ್ಲಿ 25 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಸೇರಿ ಒಟ್ಟು 10 ಕೋಟಿ ರೂಪಾಯಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದರು.
ಒಕ್ಕಲಿಗ ಸಂದ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಹಾಪ್ಕಾಮ್ಸ್ ನಿರ್ದೇಶಕ ಎಂ.ಬಿ.ವೆಂಕಟೇಶ್, ಯುವಮುಖಂಡ ನಾರಾಯಣಗೌಡ, ಸಹಕಾರ ಬ್ಯಾಂಕ್ ನಿರ್ದೇಶಕ ಬಿ.ತಮ್ಮೇಗೌಡ, ತಾಪಂ ವಿರೋಧ ಪಕ್ಷ ನಾಯಕ ಡಾ.ಡಿ.ಟಿ.ವೆಂಕಟೇಶ್, ಗಿಡ್ಡಪ್ಪನಹಳ್ಳಿ ಗ್ರಾಪಂ ಅಧ್ಯಕ್ಷೆ ನಾರಾಯಣಮ್ಮ, ಕಂಬಳೀಪುರ ಗ್ರಾಪಂ ಅಧ್ಯಕ್ಷ ಮಲ್ಲಿಕಾಅವೀನ್, ಮುಖಂಡ ಸತ್ಯವಾರ ಗೋಪಾಲಪ್ಪ, ತಾಪಂ ಮಾಜಿ ಸದಸ್ಯ ನಗರೇನಹಳ್ಳಿ ನಾಗರಾಜಪ್ಪ, ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಗುಳ್ಳಹಳ್ಳಿ ಮುನಿಯಪ್ಪ, ಮುತ್ಸಂದ್ರ ಆನಂದಪ್ಪ, ಕಂಬಳಿಪುರ ಮುನಿಯಪ್ಪ, ಕಂಬಳೀಪುರ ರಮೇಶ್, ಮಾಜಿ ಸದಸ್ಯ ಬಾಬು, ಬಿಲ್ ಕಲೆಕ್ಟರ್ ಮಂಜುನಾಥ್, ದೊಡ್ಡಹರಳಗೆರೆ ಗ್ರಾಪಂ ಅಧ್ಯಕ್ಷೆ ಶಿವಕುಮಾರಿ ಇದ್ದರು.
ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಅಡಿಗಲ್ಲು : ಸೂಲಿಬೆಲೆಯಲ್ಲಿ ಶುಕ್ರವಾರ ಬಿಸಿಎಂ ವಿದ್ಯಾರ್ಥಿ ನಿಲಯ ನಿರ್ಮಾಣದ ಕಾಮಗಾರಿ ಶಾಸಕ ಶರತ್ಬಚ್ಚೇಗೌಡ ಶಂಕುಸ್ಥಾಪನೆ ನೆರವೇರಿಸಿದರು. ಸೂಲಿಬೆಲೆಯ ಸರ್ವೇ ನಂ.10 ರಲ್ಲಿ ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ವತಿಯಿಂದ 1 ಎಕರೆ ಜಾಗ ಕಾಯ್ದಿರಿಸಲಾಗಿತ್ತು. ಇದಕ್ಕೆ ಸೂಕ್ತ ಕಾಂಪೌಂಡ್ ನಿರ್ಮಾಣ ಮಾಡಲಾಗಿದ್ದು ಇದೇ ಜಾಗದಲ್ಲಿ 3 ಕೋಟಿ ರುಪಾಯಿ ಅನುದಾನದಲ್ಲಿ ವಿದ್ಯಾರ್ಥಿನಿಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕರು ತಿಳಿಸಿದರು. ಒಕ್ಕಲಿಗ ಸಂದ ಮಾಜಿ ನಿರ್ದೇಶಕ ಬಿ.ಎನ್.ಗೋಪಾಲಗೌಡ, ಬಮುಲ್ ನಿರ್ದೇಶಕ ಬಿ.ವಿ.ಸತೀಶಗೌಡ, ಹಾಪ್ಕಾಮ್ಸ್ ನಿರ್ದೇಶಕ ಎಂ.ಬಿ.ವೆಂಕಟೇಶ್,ಗ್ರಾ.ಪಂ.ಮಾಜಿ ಅಧ್ಯಕ್ಷ ಮರವೆಕೃಷ್ಣಪ್ಪ, ಪಿಡಿಒ ವಿಜಯಕುಮಾರಿ, ಸದಸ್ಯ ಶಿವರುದ್ರಪ್ಪ, ಶಾಬಿರ್, ಜಿಯಾವುಲ್ಲಾ, ಆನಂದ್, ಅಕ್ಬರ್ಅಲಿಖಾನ್, ತಾಲೂಲೂ ವಿಸ್ತರಣಾಧಿಕಾರಿ ಸಿದ್ದೇಶ್ ಇತರರಿದ್ದರು.
ಗಿಡ್ಡಪ್ಪನಹಳ್ಳಿ, ದೊಡ್ಡಹರಳಗೆರೆ ಹಾಗೂ ಕಂಬಳೀಪುರ ಗ್ರಾಪಂ ವ್ಯಾಪ್ತಿಯಲ್ಲಿ 10 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಗಿದ್ದು, ಶಾಸಕ ಶರತ್ ಬಚ್ಚೇಗೌಡ ವಿಶೇಷ ಕಾಳಜಿಯಿಂದ ೇತ್ರ ಅಭಿವೃದ್ಧಿ ಪಥದಲ್ಲಿ ಶರವೇಗದಲ್ಲಿ ಸಾಗುತ್ತಿದೆ. > ಬಿ.ವಿ.ಸತೀಶಗೌಡ ಬಮುಲ್ ನಿರ್ದೇಶಕ ಸೆ.22ರಂದು ಜಾತಿವಾರು ಜಾತಿಗಣತಿ ಪ್ರಾರಂಭವಾಗಲಿದ್ದು, 54 ಜಾತಿಗಳ ಪಟ್ಟಿ ಇದೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ನಿಖರ ಮಾಹಿತಿ ಸಂಗ್ರಹಿಸಿ ಸೌಲಭ್ಯ ನೀಡಲು ಸಹಕಾರಿಯಾಗುತ್ತದೆ. > ಶರತ್ ಬಚ್ಚೇಗೌಡ ಶಾಸಕ