ರೈಲ್ವೆ ಕೆಳ ಸೇತುವೆ ದುರಸ್ತಿಗೊಳಿಸಿ

040222 Hospete Organations Protest for Railway Bridge Repair
ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಹೊಸಪೇಟೆಯಲ್ಲಿ ಎಡಿಸಿ ಮಹೇಶ್‌ಬಾಬುಗೆ ಶುಕ್ರವಾರ ಮನವಿ ಸಲ್ಲಿಸಿದರು.
Published on

ಹೊಸಪೇಟೆ: ಪಾಪಿನಾಯಕನಹಳ್ಳಿಗೆ ಹೊಂದಿಕೊಂಡಿರುವ ರೈಲ್ವೆ ಯಾರ್ಡ್‌ನಲ್ಲಿ ರೈಲ್ವೆ ಕೆಳ ಸುರಂಗ ಮಾರ್ಗ ದುರಸ್ತಿಗೊಳಿಸುವಂತೆ ಒತ್ತಾಯಿಸಿ ವಿಜಯನಗರ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಎಡಿಸಿ ಮಹೇಶ್ ಬಾಬುಗೆ ಶುಕ್ರವಾರ ಮನವಿ ಸಲ್ಲಿಸಿದರು. ಹಲವು ದಶಕಗಳ ಹಿಂದೆ ಅಂಡರ್‌ಪಾಸ್ ನಿರ್ಮಿಸಲಾಗಿತ್ತು. ರೈತರು, ವಿದ್ಯಾರ್ಥಿಗಳು, ಗಣಿಕಾರ್ಮಿಕರು ರೈಲ್ವೆ ಈ ಮಾರ್ಗದ ಮೂಲಕ ಸುರಕ್ಷಿತವಾಗಿ ರೈಲ್ವೆ ಯಾರ್ಡ್‌ನ ಎರಡು ಬದಿಗೆ ಸಂಚರಿಸುತ್ತಿದ್ದರು. ಕೆಲ ವರ್ಷಗಳಿಂದ ರೈಲ್ವೆ ಯಾರ್ಡ್‌ನ ವಿಸ್ತರಣೆ, ವಿದ್ಯುದೀಕರಣ, ಮತ್ತಿತರ ಕಾಮಗಾರಿಯಿಂದಾಗಿ ಇಲಾಖೆಯವರು ಅಂಡರ್ ಪಾಸ್ ಮುಚ್ಚಿದ್ದಾರೆ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗಿದೆ. ಕೂಡಲೇ ಕೆಳ ಸೇತುವೆ ದುರಸ್ತಿಗೊಳಿಸಿ ಮರುಚಾಲನೆ ನೀಡುವಂತೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net