ಬಾಡ ಗ್ರಾಮದ ಹೊಸತಿನ ಹಬ್ಬ ಸಂಪನ್ನ

Hosatu Habba
Published on

ಕಾರವಾರ: ಬಾಡ ಗ್ರಾಮ ದೇವರಾದ ಮಹಾದೇವ ದೇವರ ಹೊಸತಿನ ಹಬ್ಬ ಬುಧವಾರ ನಡೆಯಿತು. ಹಬ್ಬದ  ಅಂಗವಾಗಿ ಕಂಚಿಕಾ ಪರಮೇಶ್ವರಿ ದೇವರ ಕಳಶ ಸಂಚಾರ ಬುಧವಾರ ನಗರದಲ್ಲಿ ನಡೆಯಿತು.

ಭತ್ತದ ಕದಿರಿನಿಂದ ಅಲಂಕೃತವಾದ ಕಳಶ ಹೊತ್ತ ಗುನಗರು ದೇವತಿ ದೇವಸ್ಥಾನದಿಂದ ಹೊರಟು ಹಬ್ಬುವಾಡ ಗಣಪತಿ ದೇವಸ್ಥಾನ, ಶೇಬಿದೇವಸ್ಥಾನ ಕಳಸವಾಡ, ಮುಂತಾದೆಡೆ ಸಂಚರಿಸಿ ಪೂಜೆ ಪಡೆದರು. ನಂತರ ವಾಪಸ್‌ ಆಗಮಿಸಿದರು. ಮಹಾದೇವ ವಿನಾಯಕ ಟ್ರಸ್ಟ್‌ ಕಮಿಟಿ ಅಧ್ಯಕ್ಷ ಅರವಿಂದ ಗುನಗಿ ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net