ರಾಜ್ಯದವರಿಗೆ ರೈಲ್ವೆ ಸಹಾಯಕ ಸಚಿವ ಸ್ಥಾನ ನೀಡಲಿ: ವಿಜಯನಗರ ನಾಗರಿಕ ವೇದಿಕೆ ಒತ್ತಾಯ

Vijayanagara Nagarika Vedike
ಹೊಸಪೇಟೆಯಲ್ಲಿ ಎಸಿ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಪ್ರಭಾಗೆ ವಿಜಯನಗರ ನಾಗರಿಕ ವೇದಿಕೆ ಮನವಿ ಸಲ್ಲಿಸಿತು.
Published on

ಹೊಸಪೇಟೆ: ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭ ಕರ್ನಾಟಕದ ಲೋಕಸಭಾ ಸದಸ್ಯರಿಗೆ ರೈಲ್ವೆ ಸಹಾಯಕ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ವಿಜಯನಗರ ನಾಗರಿಕ ವೇದಿಕೆ ಹಾಗೂ ರೈಲ್ವೆ ಅಭಿವೃದ್ಧಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಪ್ರಧಾನಮಂತ್ರಿಗೆ ಬರೆದ ಮನವಿ ಪತ್ರವನ್ನು ಮಂಗಳವಾರ ಎಸಿ ಕಚೇರಿ ಗ್ರೇಡ್-2 ತಹಸೀಲ್ದಾರ್ ಪ್ರಭಾಗೆ ಸಲ್ಲಿಸಿದರು.

ವೇದಿಕೆ ಅಧ್ಯಕ್ಷ ವೈ.ಯಮುನೇಶ್ ಮಾತನಾಡಿ, 2019 ರಿಂದ 2020ರವರೆಗೆ ಕೇಂದ್ರ ಸಂಪುಟದಲ್ಲಿ ಸುರೇಶ್ ಅಂಗಡಿ ರಾಜ್ಯ ರೈಲ್ವೆ ಖಾತೆ ಸಚಿವರಾಗಿದ್ದರು. ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ರೈಲ್ವೆ ಸೌಲಭ್ಯ ಕಲ್ಪಿಸಿದರಲ್ಲದೆ ಮಾದರಿ ರಾಜ್ಯವನ್ನಾಗಿಸಲು ಶ್ರಮಿಸಿದರು. ಆದರೆ, ಅವರ ಅಕಾಲಿಕ ನಿಧನದಿಂದ ಅನೇಕ ಯೋಜನೆಗಳು ಅರ್ಧಕ್ಕೆ ನಿಂತು ಹೋಗಿದ್ದು, ರೈಲ್ವೆ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ದೊಡ್ಡ ಹಿನ್ನಡೆಯಾಗಿದೆ. ಆದ್ದರಿಂದ ಸಂಪುಟ ಪುನಾರಚನೆ ವೇಳೆ ಕರ್ನಾಟಕದ ಸಂಸದರಿಗೆ ರಾಜ್ಯ ರೈಲ್ವೆ ಖಾತೆ ನೀಡಬೇಕು ಎಂದು ಒತ್ತಾಯಿಸಿದರು. ಸಮಿತಿ ಪದಾಧಿಕಾರಿಗಳಾದ ಬಿ.ವಿರೂಪಾಕ್ಷಪ್ಪ, ರಮೇಶ್ ಗೌಡ, ದೇವರೆಡ್ಡಿ, ಕೌತಾಳ್ ವಿಶ್ವನಾಥ, ಐಲಿ ಸಿದ್ದಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net