ಹಣಮಂತ ಗೋವಿಂದಪ್ಪ ದಡ್ಡಿ, ಡಾ.ವೂಡೇ ಪಿ.ಕೃಷ್ಣಗೆ ನಾಡೋಜ ಗೌರವ ಪದವಿ

Kannada VV Nadoja Award Hanumantappa Daddi, Voode P Krishna
ಹಣಮಂತ ಗೋವಿಂದಪ್ಪ ದಡ್ಡಿ, ಡಾ.ವೂಡೇ ಪಿ.ಕೃಷ್ಣ.
Published on

10 ರಂದು ಕನ್ನಡ ವಿವಿ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪ್ರದಾನ

ಹೊಸಪೇಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿಯ ದಡ್ಡಿ ಆಸ್ಪತ್ರೆಯ ವೈದ್ಯ ಹಣಮಂತ ಗೋವಿಂದಪ್ಪ ದಡ್ಡಿ ಮತ್ತು ಬೆಂಗಳೂರಿನ ಶೇಷಾದ್ರಿಪುರಂ ಎಜುಕೇಷನ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ, ಶಿಕ್ಷಣ ತಜ್ಞ ಡಾ.ವೂಡೇ ಪಿ.ಕೃಷ್ಣ ಅವರಿಗೆ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಗೌರವ ಪದವಿ ನೀಡಿದ್ದು, ನ.10ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ಪ್ರದಾನ ಮಾಡಲಿದೆ.

ರಾಜ್ಯಪಾಲ ವಝುಭಾಯಿ ರೂಡಾಭಾಯಿ ವಾಲಾ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ ಡಿ.ಲಿಟ್ ಹಾಗೂ ಪಿಎಚ್.ಡಿ ಪದವಿ ಪ್ರದಾನ ಮಾಡಲಿದ್ದಾರೆ. ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಮತ್ತು ವಿಶ್ರಾಂತ ಕುಲಪತಿ ಪ್ರೊ.ಎಸ್.ಸಿ.ಶರ್ಮಾ, ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಈ ಸಂದರ್ಭ ಇಬ್ಬರಿಗೆ ಡಿ.ಲಿಟ್ ಪದವಿ, 74 ಪಿಎಚ್.ಡಿ., 32 ಎಂಫಿಲ್ ಹಾಗೂ 13 ಬಿ.ಮ್ಯೂಜಿಕ್ ಪದವಿ ಪ್ರದಾನ ನಡೆಯಲಿದೆ. ಸ್ನಾತಕೋತ್ತರ ಪದವಿಯಲ್ಲಿ ಒಟ್ಟು 576 ವಿದ್ಯಾರ್ಥಿಗಳು, ಡಿಪ್ಲೊಮಾ ಕೋರ್ಸ್‌ಗಳಲ್ಲಿ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಘಟಿಕೋತ್ಸವವನ್ನು ನೇರವಾಗಿ ಕಣ್ತುಂಬಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು, ಸಂಶೋಧಕರು ಹಾಗೂ ಸಾರ್ವಜನಿಕರು ವಿವಿಯ ಅಧಿಕೃತ ಯುಟ್ಯೂಬ್ ಜಾಲತಾಣ, ಜೂಮ್ ಆನ್‌ಲೈನ್ ಮೀಟಿಂಗ್ ಐಡಿ ನಂ:8276593779, ಪಾಸ್‌ವರ್ಡ್: ಕೆಯುಎಚ್2020 ಮೂಲಕ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net