

ಹೊಸಪೇಟೆ: ಈ ಹಿಂದಿನ ಸರ್ಕಾರ ಮಂಜೂರು ಮಾಡಿರುವ ಜಾಗೆಯಲ್ಲಿ ಹಂಪಿ ಶುರ‍್ಸ್ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಚರ್ಚೆ ನಡೆದಿದೆ ಎಂದು ದಾವಣಗೆರೆ ಸಂಸದರೂ ಆಗಿರುವ ಗ್ರುಪ್ ಸಿದ್ಧೇಶ್ವರ ಕಂಪನಿಯ ಜೆ.ಎಂ.ಸಿದ್ದೇಶ್ವರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಂಭುನಾಥನಹಳ್ಳಿಯಲ್ಲಿ ಸರ್ಕಾರ ಕ್ಯಾಬಿನೆಟ್ ಮೂಲಕ ಕಾನೂನು ಬದ್ಧವಾಗಿ ನಮ್ಮ ಕಂಪನಿಗೆ ಭೂಮಿ ಕೊಟ್ಟಿದೆ. ಅದಕ್ಕೆ ನಿಗದಿಗೊಳಿಸಿದ ಸರ್ಕಾರಿ ಶುಲ್ಕವನ್ನೂ ಪಾವತಿಸಿದ್ದೇವೆ. ಹೀಗಾಗಿ ಕಾನೂನಾತ್ಮಕವಾಗಿ ನಮ್ಮ ಹಕ್ಕು ಪ್ರತಿಪಾಧಿಸುತ್ತೇವೆ. ಅದಕ್ಕೆ ಅಡ್ಡಿಪಡಿಸುವುದು ಸಮಂಜಸವಲ್ಲ ಎಂದರು.
ಇತ್ತೀಚೆಗೆ ಸಕ್ಕರೆ ಕಾರ್ಖಾನೆ ನೀಡಿರುವ ಜಮೀನು ಮಂಜೂರಾತಿ ರದ್ದುಗೊಳಿಸಬೇಕು ಎಂದು ಶಾಸಕ ಎಚ್.ಆರ್.ಗವಿಯಪ್ಪ ಪತ್ರ ಬರೆದಿರುವುದು, ವಿವಿಧ ಸಂಘಟನೆಗಳು ಮನವಿ ಸಲ್ಲಿಸಿದ್ದೂ ನಮ್ಮ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳು ಶಾಸಕರು, ಮತ್ತಿತರರ ಮನವೊಲಿಸುವರು ಎಂದಷ್ಟೇ ಹೇಳಿದರು.