

ಹೊಸಪೇಟೆ: ನಗರದ ಹೊರವಲಯದ ಹೊಸಪೇಟೆ-ಸಂಡೂರು ಬೈಪಾಸ್ ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಬೈಪಾಸ್ ಫ್ಲೈವೋವರ್ ಬಳಿ ಶನಿವಾರ ಪ್ರತಿಭಟನೆ ನಡೆಸಿತು.
ಕಾಮಗಾರಿ ಕೈಗೊಂಡು ಹಲವು ವಷರ್ಗಳು ಕಳೆದರೂ ಇನ್ನೂ ಪೂರ್ಣಗೊಳಿಸಿಲ್ಲ. ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಇದರಿಂದ ಕಣಿವೆರಾಯನಗುಡಿ, ರಾಂಪುರ, ಕಲ್ಲಹಳ್ಳಿ ಗ್ರಾಮಗಳ ಜನರಿಗೆ ಸಮಸ್ಯೆಯಾಗುತ್ತಿದೆ. ಅನೇಕ ಅಪಘಾತಗಳು ಸಂಭವಿಸುತ್ತಿವೆ. ಲಾರಿಗಳು ವೇಗವಾಗಿ ಚಲಾಯಿಸದಂತೆ ಮೈನಿಂಗ್ ಕಂಪನಿ ಹಾಗೂ ಟ್ರಾನ್ಸ್‌ಪೋರ್ಟ್ ಲಾರಿ ಮಾಲಕರು ಚಾಲಕರಿಗೆ ತಿಳಿಸಬೇಕು. ವಾಹನಗಳ ಧೂಳು ಬೆಳೆಗಳ ಮೇಲೆ ಮೆತ್ತಿಕೊಳ್ಳುವುದರಿಂದ ಇಳುವರಿ ಕುಂಠಿತವಾಗಿದ್ದು, ಪರಿಹಾರ ನೀಡಬೇಕು. ಕಾಮಗಾರಿ ಪೂರ್ಣಗೊಳ್ಳುವವರೆಗೆ ಬ್ರಿಡ್ಜ್ ಬಳಿ ಬ್ಯಾರಿಕೇಡ್, ಸ್ಪೀಡ್ ಬ್ರೇಕರ್ ಅಳವಡಿಸಬೇಕೆಂದು ಒತ್ತಾಯಿಸಿದರು.