ಹೊಸಪೇಟೆ ತಾಲೂಕಿನ ಬುಕ್ಕಸಾಗರದಲ್ಲಿ ದುಷ್ಕರ್ಮಿಗಳಿಂದ ಮೆಕ್ಕೆಜೋಳ ಬೆಳೆ ನಾಶ

140320 Bukkasagara Maize Crop Smash
Published on

ಹೊಸಪೇಟೆ: ತಾಲೂಕಿನ ಬುಕ್ಕಸಾಗರದ ಬಳಿ ಶ್ರೀ ಕಿನ್ನೂರೇಶ್ವರ ದೇವಸ್ಥಾನದ ಸರ್ವೇ ನಂ.67ರ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಎರಡೂವರೆ ತಿಂಗಳ ಮೆಕ್ಕೆಜೋಳದ ಬೆಳೆಯನ್ನು ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ.

ಕೆಲ ವರ್ಷಗಳವರೆಗೆ ಖಾಸಗಿ ವ್ಯಕ್ತಿಗಳು ದೇವಸ್ಥಾನದ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದರು. ಆದರೆ ದೇವಸ್ಥಾನಕ್ಕೆ ನಯಾ ಪೈಸೆ ನೀಡುತ್ತಿರಲಿಲ್ಲ. ಹಾಗಾಗಿ ಈ ಬಾರಿ ದೇವಸ್ಥಾನದಿಂದಲೇ ಬೆಳೆ ಬೆಳೆಯಲಾಗಿತ್ತು. ಈವರೆಗೆ ಬೆಳೆಗೆ 50 ಸಾವಿರ ರೂ. ಖರ್ಚು ಮಾಡಲಾಗಿತ್ತು ಎಂದು ದೇವಸ್ಥಾನ ಟ್ರಸ್ಟ್‌ನ ಕಾಂತರೆಡ್ಡಿ ತಿಳಿಸಿದ್ದಾರೆ. ಕೆಲ ವ್ಯಕ್ತಿಗಳ ಮೇಲೆ ಅನುಮಾನವಿದ್ದು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಗ್ರಾಮಸ್ಥರಿಂದ ದೂರು ದಾಖಲಿಸುತ್ತೇವೆ ಎಂದು ಗ್ರಾಮದ ಮುಖಂಡ ತಿಪ್ಪಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net