

ಹೊಸಪೇಟೆ: ಎನ್ನ ಕಾಲೇ ಕಂಬ, ದೇಹವೇ ದೇಗುಲ ಎಂಬ ಬಸವಣ್ಣನವರ ವಚನದಲ್ಲಿ ಯೋಗ ಚಿಂತನೆ ಇದೆ. ಜೀವನವನ್ನು ಪ್ರೀತಿವುದು ಮುಖ್ಯ ಎಂದು ಬಸವಾದಿ ಶರಣರು ತಮ್ಮ ವಚನಗಳಲ್ಲಿ ಸರಳವಾಗಿ ಹೇಳುತ್ತಲೇ ಬಂದಿದ್ದಾರೆ ಎಂದು ಖಾಸಗಿ ಕಾಲೇಜಿನ ಪ್ರಾಂಶುಪಾಲ ಎಚ್.ಎಂ.ನಿರAಜನ ಹೇಳಿದರು.
ಪತಂಜಲಿ ಯೋಗ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆದ ಬಸವೇಶ್ವರ ಜಯಂತಿ ಕಾರ್ಯಕ್ರಮ ಮಾತನಾಡಿದರು. ಬಸವಣ್ಣನವರ ಷಟ್‌ಸ್ಥಳ ಚಿಂತನೆಯ ಹಿಂದೆ ನಮ್ಮ ದೈನಂದಿನ ಬದುಕಿಗೆ ಬೇಕಾದ ಮಾರ್ಗಸೂಚಿ ಇದೆ. ಅವರು ಪ್ರತಿಪಾದಿಸಿದ ಲಿಂಗಾAಗ ಯೋಗದಲ್ಲೂ ಯೋಗ ತತ್ವ ಗಾಢವಾಗಿದೆ. ದೇಹವನ್ನು ಪ್ರೀತಿಸುತ್ತಲೇ ಕಾಯಕ ಮಾಡಬೇಕು. ಅದುವೇ ಶಿವನ ಆರಾಧನೆ ಎಂದು ಸರಳವಾಗಿ ತಿಳಿಸಿಕೊಟ್ಟ ಮಾತು ಎಂದೆAದಿಗೂ ಪ್ರಸ್ತುತ ಎಂದರು.
ಪತAಜಲಿ ಯೋಗ ಸಮಿತಿಯ ಜಿಲ್ಲಾ ಪ್ರಭಾರಿ ಪ್ರೊ.ಎಫ್.ಟಿ.ಹಳ್ಳಿಕೇರಿ ಮಾತನಾಡಿ, ಬಸವಣ್ಣ ಸಹಿತ 12ನೇ ಶತಮಾನದ ಶಿವಶರಣರ ವಚನಗಳಲ್ಲಿ ಸಂವಿಧಾನದ ಮೂಲವನ್ನು ಕಾಣಬಹುದು. ಸರಳ ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಸರ್ವ ಸಮುದಾಯದ ಜನರನ್ನು ಕಟ್ಟಿಕೊಂಡು ಸಮಾನತೆಯನ್ನು ತರುವ ಯತ್ನ ಮಾಡಿದ ಬಸವಣ್ಣನವರ ಪ್ರಯತ್ನ ಅದ್ಭುತವಾದುದು ಎಂದರು.
ಯುವ ಭಾರತ ರಾಜ್ಯ ಪ್ರಭಾರಿ ಕಿರಣ್ ಕುಮಾರ್, ಹಿರಿಯ ಯೋಗ ಶಿಕ್ಷಕ ಪ್ರಕಾಶ್ ಕುಲಕರ್ಣಿ, ವೀರೇಶ್, ಅನಂತ ಜೋಷಿ, ಶ್ರೀರಾಮ್, ಅಶೋಕ ಚಿತ್ರಗಾರ, ಶಿವಮೂರ್ತಿ, ಡಾ.ರಾಜಶೇಖರ, ರಾಘವೇಂದ್ರ ಪರಗಿ, ಸಿದ್ದರಾಮಪ್ಪ ಇತರರಿದ್ದರು.