ಆಂಜನೇಯ ಮೂರ್ತಿ ಪ್ರತಿಷ್ಠಾಪನೆಗೆ ಜಾಗ ನೀಡಲು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಒತ್ತಾಯ

270122 Hospete Veerashaiva Lingayata Organization Forum Appeal
Shashidhara L
Published on

ಹೊಸಪೇಟೆ: ತಾಲೂಕಿನ ಕಮಲಾಪುರ ಹೋಬಳಿಯ ಕಾಳಘಟ್ಟದಲ್ಲಿ ಆಂಜನೇಯ ಸ್ವಾಮಿ ಮೂರ್ತಿ ಪ್ರತಿಷ್ಠಾಪನೆಗೆ ಜಾಗ ಮಂಜೂರು ಮಾಡುವಂತೆ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಸದಸ್ಯರು ಎಡಿಸಿ ಮಹೇಶ್ ಬಾಬುಗೆ ಮನವಿ ಸಲ್ಲಿಸಿದರು.

ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ ಕಂಕಣವಾಡಿ ಮಾತನಾಡಿ, ಕಾಳಘಟ್ಟ ಗ್ರಾಮದಲ್ಲಿ ಶ್ರೀ ವೀರಭದ್ರಸ್ವಾಮಿ ಪರಂಪರೆಯ ಪುನರುತ್ಥಾನ ಕೇಂದ್ರ ಸ್ಥಾಪಿಸಲು ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ನಿರ್ಧರಿಸಿದೆ. ಗ್ರಾಮದ ಸರ್ವೇ ನಂ.218ರಲ್ಲಿರುವ 102.12 ಎಕರೆ ಸರ್ಕಾರಿ ಜಮೀನು ಗುಡ್ಡ ಪ್ರದೇಶವಾಗಿದೆ. ಈ ಸ್ಥಳದಲ್ಲಿ ಹಂಪಿ ವಿಶ್ವಪರಂಪರೆಗೆ ಸಂಬಂಧಿಸಿದ ಯಾವುದೇ ಸ್ಮಾರಕಗಳಿಗೆ ಧಕ್ಕೆಯಾಗದಂತೆ ಕಾನೂನು ಪಾಲಿಸಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯ ನಿರ್ವಹಿಸಲಾಗುವುದು. ಸರ್ಕಾರ ಶೈವ ಧರ್ಮದ ಪುನರುತ್ಥಾನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ವೀರಶೈವ ಲಿಂಗಾಯತ ಮಹಿಳಾ ಘಟಕ ವಿಜಯನಗರ ಜಿಲ್ಲಾಧ್ಯಕ್ಷೆ ಡಿ. ಶಶಿಕಲಾ ನಾಗರಾಜ, ತಾಲೂಕಾಧ್ಯಕ್ಷೆ ಬಿಂದುಶ್ರೀ ಮಲ್ಲಿಕಾರ್ಜುನ, ಜಿಲ್ಲಾಧ್ಯಕ್ಷ ಉದ್ವಾಳ ಪಂಪಾಪತಿ, ಉಪಾಧ್ಯಕ್ಷ ಎಚ್. ಹನುಮಂತರೆಡ್ಡಿ, ಕಾರ್ಯದರ್ಶಿ ಎಚ್.ಕೆ. ಮಹಾಂತೇಶ, ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ, ಮುಖಂಡರಾದ ಎ. ಸಿದ್ದೇಶ್ವರ ಕಮಲಾಪುರ, ಬಸವನಗೌಡ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net