ಕನ್ನಡ ವಿವಿಯಲ್ಲಿ ಫೆ.25, 26ರಂದು ಹಸ್ತಪ್ರತಿ ಸಮ್ಮೇಳನ, ಹರಿದಾಸ ಸಾಹಿತ್ಯ ಸಂಪಾದಕಿ ಟಿ.ಎನ್.ನಾಗರತ್ನ ಅಧ್ಯಕ್ಷತೆ

23022020 Hosapete Kannada VV TN Nagarathna
Published on

ಹೊಸಪೇಟೆ: ಕನ್ನಡ ವಿವಿಯ ಮಂಟಪ ಸಭಾಂಗಣದಲ್ಲಿ ಹಸ್ತಪ್ರತಿಶಾಸ್ತ್ರ ವಿಭಾಗ ಫೆ.25 ಮತ್ತು 26 ರಂದು ಅಖಿಲ ಕರ್ನಾಟಕ 16ನೇ ಹಸ್ತಪ್ರತಿ ಸಮ್ಮೇಳನ ಹಮ್ಮಿಕೊಂಡಿದೆ. ಹರಿದಾಸ ಸಾಹಿತ್ಯ ಸಂಪಾದಕಿ, ಹಿರಿಯ ವಿದ್ವಾಂಸರಾದ ಡಾ.ಟಿ.ಎನ್.ನಾಗರತ್ನ ಸಮ್ಮೇಳನಾಧ್ಯಕ್ಷರಾಗಿದ್ದಾರೆ.

ಉಜಿರೆಯ ಹಿರಿಯ ವಿದ್ವಾಂಸ ಡಾ.ಎಸ್.ಡಿ.ಶೆಟ್ಟಿ ಉದ್ಘಾಟಿಸಲಿದ್ದಾರೆ. ಕುಲಪತಿ ಡಾ.ಸ.ಚಿ.ರಮೇಶ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಕೆ.ರವೀಂದ್ರನಾಥ ಅವರ ಸಂಪಾದಕತ್ವದ ಹಸ್ತಪ್ರತಿ ವ್ಯಾಸಂಗ=19, ಲಿಂಗಣ್ಣ ಕವಿಯ ವರರಮ್ಯ ರತ್ನಾಕರ ಪುಸ್ತಕ ಬಿಡುಗಡೆ, ಡಾ.ಆರ್.ಸಿ.ಹಿರೇಮಠ ಜನ್ಮ ಶತಮಾನೋತ್ಸವ ಸಂಸ್ಮರಣೆ ನಿಮಿತ್ತ ಮಧ್ಯಾಹ್ನ 2.30ಕ್ಕೆ ಮತ್ತು ಸಂಜೆ 4ಕ್ಕೆ ಗೋಷ್ಠಿಗಳು ನಡೆಯಲಿವೆ. ಫೆ.26ರಂದು ಬೆಳಗ್ಗೆ 10ಕ್ಕೆ ಹಸ್ತಪ್ರತಿಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ವೀರೇಶ ಬಡಿಗೇರರಿಂದ ವಿಶೇಷ ಉಪನ್ಯಾಸ, ಹಿರಿಯ ವಿದ್ವಾಂಸೆ ಡಾ.ಅಕ್ಕಮಹಾದೇವಿ ಅಧ್ಯಕ್ಷತೆ ವಹಿಸುವರು. 11.30ಕ್ಕೆ ಗೋಷ್ಠಿ, ಹಸ್ತಪ್ರತಿ ಮತ್ತು ಗ್ರಂಥ ಸಂಪಾದನೆ:ಇತ್ತೀಚಿನ ಒಲವುಗಳು ಯುವ ಸಂಶೋಧಕರಿಂದ ಪ್ರಬಂಧ ಮಂಡನೆಯಾಗಲಿದ್ದು, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ಅಧ್ಯಕ್ಷತೆವಹಿಸಲಿದ್ದಾರೆ ಎಂದು ಕುಲಸಚಿವ ಡಾ.ಎ.ಸುಬ್ಬಣ್ಣ ರೈ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net