ವಕೀಲ ಬಸವರಾಜ್ ಕರ್ಕಿಹಳ್ಳಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದವರ ಬಂಧಿಸಿ

22 HPT 3
Published on

ಹೊಸಪೇಟೆ: ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ವಕೀಲ ಬಸವರಾಜ್ ಕರ್ಕಿಹಳ್ಳಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ, ತಕ್ಷಣವೇ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ನಗರದಲ್ಲಿ ಜಿಲ್ಲಾ ವಕೀಲರ ಸಂಘದಿಂದ ಬೃಹತ್ , ಬೈಕ್‌ ಜಾಥಾ, ನಡೆಯಿತು.

ನಗರದ ಮಹರ್ಷಿ ವಾಲ್ಮೀಕಿ ವೃತ್ತದಿಂದ ಎಸ್ಪಿ ಕಚೇರಿವರೆಗೆ , ಬೈಕ್‌ ಜಾಥಾ, ಜಿಲ್ಲಾ ಪೊಲೀಸ್ ವಿಶೇಷ ವಿಭಾಗದ ಇನ್‌ಸ್ಪೆಕ್ಟರ್ ಮಲಕಾಜಪ್ಪ ಡಪ್ಪಿನ್, ಗ್ರಾಮೀಣ ಪಿಎಸ್‌ಐ ದೀಪಕ್ ಆರ್.ಭೂಸರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಯಾವುದೋ ಕಾರಣಕ್ಕೆ ವಕೀಲ ಬಸವರಾಜ ಕರ್ಕಿಹಳ್ಳಿ ಅವರೊಂದಿಗೆ ಸ್ಥಳೀಯ ರಾಜಕೀಯ ಮುಖಂಡ ತೆಗೆದಿದ್ದಾರೆ. ಮುಖಂಡನ ಇಬ್ಬರ ಮಕ್ಕಳು ಹಾಗೂ ಸುಮಾರು 10-12 ಜನ ಸೇರಿ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇತ್ತೀಚಿನ ದಿನಗಳಲ್ಲಿ ವಕೀಲರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ವಕೀಲರು ನಿರ್ಭೀತಿಯಿಂದ ಕೆಲಸ ಮಾಡುವ ವಾತಾವರಣ ಇಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ವಕೀಲ ಬಸವರಾಜ ಮೇಲೆ ಹಲ್ಲೆಮಾಡಿದವರನ್ನು ತಕ್ಷಣ ಬಂಧಿಸಬೇಕು. ಹಲ್ಲೆಗೊಳಗಾದ ಬಸವರಾಜ್ ಕರ್ಕಿಹಳ್ಳಿ ಅವರಿಗೆ ಪೊಲೀಸ್ ಇಲಾಖೆಯಿಂದ ರಕ್ಷಣೆ ಒದಗಸಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಕಾರ್ಯದರ್ಶಿ ಎ.ಕರುಣಾನಿಧಿ, ಪ್ರಮುಖರಾದ ಎಚ್.ವಿಶ್ವನಾಥ, ಎ.ಮರಿಯಪ್ಪ, ಸುರೇಶ, ಎಚ್.ಮಹೇಶ, ಸ್ನೇಹಾ, ರೇಷ್ಮಾ ಬಿ., ಎನ್.ಎಂ.ಸೌದಾಗರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net