ಏ.10ಕ್ಕೆ ಯಶವಂತಪುರ-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಆರಂಭ

Train_2
Published on

ಹೊಸಪೇಟೆ: ಯಶವಂತಪುರ-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲು ಏ.10ರಂದು ಆರಂಭಗೊಳ್ಳಲಿದೆ. ಏ.10 ರಂದು ಯಶವಂತಪುರದಿಂದ ರಾತ್ರಿ 9.30ಕ್ಕೆ (ಗಾಡಿ ಸಂಖ್ಯೆ 06541) ಹೊರಡಲಿದ್ದು, ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಪನಹಳ್ಳಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಮರಿಯಮ್ಮನಹಳ್ಳಿ, ಹೊಸಪೇಟೆ, ಕೊಪ್ಪಳ, ಗದಗ, ಮಲ್ಲಾಪುರ, ಹೊಳೆ ಹಾಲೂರು, ಬಾದಾಮಿ, ಬಾಗಲಕೋಟೆ, ಆಲಮಟ್ಟಿ ಮಾರ್ಗವಾಗಿ ವಿಜಯಪುರ ತಲುಪಲಿದೆ. ಏ.11 ರಂದು ವಿಜಯಪುರ ರೈಲು ನಿಲ್ದಾಣದಿಂದ ಇದೇ ಮಾರ್ಗವಾಗಿ ರಾತ್ರಿ 10.20ಕ್ಕೆ ಹೊರಟು ಯಶವಂತಪುರ ತಲುಪಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net