ಟಿಬಿ ಡ್ಯಾಂನಿಂದ 54 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡುಗಡೆ; ಹಂಪಿ ಪುರಂದರಮಂಟಪ ಜಲಾವೃತ

18082020 Hospet Hampi Purandara Mantapa
Published on

ಹೊಸಪೇಟೆ : ತುಂಗಭದ್ರಾ ಜಲಾಶಯದಿಂದ 20 ಕ್ರಸ್ಟ್ ಗೇಟ್‌ಗಳನ್ನು ಎತ್ತಿ 54,474 ಕ್ಯೂಸೆಕ್ ನೀರು ನದಿಗೆ ಬಿಟ್ಟಿದ್ದರಿಂದ ಹಂಪಿಯ ಪುರಂದರದಾಸರ ಮಂಟಪವು ಮಂಗಳವಾರ ಜಲಾವೃತವಾಗಿದೆ. ಇದರೊಂದಿಗೆ ನದಿ ತೀರದಲ್ಲಿರುವ ಚಕ್ರತೀರ್ಥದ ಬಳಿಯ ನೂರೆಂಟು ಶಿವಲಿಂಗ, ನಂದಿ, ಸಾಲು ಕಂಬ, ಮಂಟಪಗಳು ಮುಳುಗಿವೆ. ನದಿ ಪ್ರವಾಹ ವೀಕ್ಷಿಸಲು ಮುನ್ನುಗ್ಗುತ್ತಿರುವ ಪ್ರವಾಸಿಗರನ್ನು ಪೊಲೀಸರು ನಿಯಂತ್ರಿಸಿದರು. ಶ್ರೀರಾಮಲಕ್ಷ್ಮಣ ಹಾಗೂ ಯಂತ್ರೋದ್ಧಾರಕ ದೇವಸ್ಥಾನಕ್ಕೆ ತೆರಳುವ ಮಾರ್ಗ ಮುಕ್ತವಾಗಿದೆ. ಒಂದು ಲಕ್ಷ ಕ್ಯೂಸೆಕ್ ನೀರು ಹರಿಸಿದರೆ ಈ ಮಾರ್ಗವೂ ಬಂದ್ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net