ಹೊಸಪೇಟೆಯಲ್ಲಿ ಧಾರಾಕಾರ ಮಳೆ: ತುಂಬಿ ಹರಿದ ಚರಂಡಿಗಳು, ರಸ್ತೆಯಲ್ಲಿ ನೀರು ಸಂಗ್ರಹ

2109 Hospet Rain
ಸಾಂದರ್ಭಿಕ ಚಿತ್ರ
Published on

ಹೊಸಪೇಟೆ: ನಗರದಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿಯಿತು. ನಸುಕಿನಿಂದ ಬೆಳಗ್ಗೆ 11 ಗಂಟೆವರೆಗೆ ಜಿಟಿಜಿಟಿ ಹನಿಯಿತು. ಮಧ್ಯಾಹ್ನ ಎರಡು ಗಂಟೆವರೆಗೆ ಬಿಡುವು ನೀಡಿದ್ದ ಮಳೆರಾಯ ಬಳಿಕ ಸಂಜೆ ಐದು ಗಂಟೆವರೆಗೆ ರಭಸದಿಂದ ಸುರಿದ. ನಗರದ ಸಾಯಿಬಾಬಾ, ಕಾಲೇಜು ರಸ್ತೆಗಳಲ್ಲಿ ಮಳೆ ನೀರು ಸಂಗ್ರಹಗೊಂಡು ಸಂಚಾರಕ್ಕೆ ತೊಂದರೆ ಉಂಟಾಯಿತು. ಚರಂಡಿಗಳು ತುಂಬಿ ರಸ್ತೆಯಲ್ಲಿ ನೀರು ಹರಿಯಿತು. ನೌಕರರು ಕಚೇರಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಪರದಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net