ಕಾಂಗ್ರೆಸ್ ಕೈವಾಡವಿದೆ ಎಂದ ರೇಣುಕಾಚಾರ್ಯ

mp renukacharya
Published on

ಹೊಸಪೇಟೆ: ಹುಬ್ಬಳ್ಳಿ ಗಲಭೆ ಹಿಂದೆ ಕಾಂಗ್ರೆಸ್ ಕೈವಾಡವಿದೆಯೆಂದು ಶಾಸಕ ರೇಣುಕಾಚಾರ್ಯ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಿಂದ ಕೋಮುಸೌಹಾರ್ದ ಕದಡುವ ಕೆಲಸ ನಿರಂತರ ನಡೆದಿದೆ. ಟಿಪ್ಪು ಜಯಂತಿ ಆಚರಣೆ, ಡಿಜೆ-ಕೆಜಿ ಹಳ್ಳಿಯಲ್ಲಿ ವಿಷಯದಲ್ಲಿ ಕಾಂಗ್ರೆಸ್‌ನವರಿಂದಲೇ ಸಮಸ್ಯೆಯಾಯಿತು. ಭಾರತ ನೆಲದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪಾಪಿಗಳಿದ್ದಾರೆ. ಹಿಂದು ದೇವಾಲಯಗಳನ್ನು ಕೂಡ ವಿಕೃತಿಗೊಳಿಸಿದವರಿದ್ದಾರೆ. ಇವರೆಲ್ಲರಿಗೂ ಕಾಂಗ್ರೆಸ್ ಸಹಕಾರವಿದೆ. ಸಂತೋಷ್ ಪಾಟೀಲ್ ವಿಚಾರದಲ್ಲಿ ಕೆ.ಎಸ್.ಈಶ್ವರಪ್ಪರ ಕೈವಾಡವಿಲ್ಲ. ಅವರನ್ನು ರಾಜಕೀಯವಾಗಿ ಮುಗಿಸಲು ಕಾಂಗ್ರೆಸ್‌ನವರೇ ಯಾಕೆ ಕೊಲೆ ಮಾಡಿರಬಾರದು ಎಂದು ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net