ದಲಿತ ಸಮುದಾಯಕ್ಕೆ ಅಪಮಾನ: ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಹೊಸಪೇಟೆಯಲ್ಲಿ ಬಿಜೆಪಿ ಮುಖಂಡರ ಪ್ರತಿಭಟನೆ

08112021 hOSPET BJP PROTEST
Published on


ಹೊಸಪೇಟೆ: ಹೊಟ್ಟೆ ಪಾಡಿಗೆ ದಲಿತರು ಬಿಜೆಪಿಗೆ ಹೋಗಿದ್ದಾರೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಭಾಜಪ ಎಸ್ಸಿ ಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

ಎಸ್ಸಿ ಮೋರ್ಚಾ ತಾಲೂಕು ಅಧ್ಯಕ್ಷ ಜೆ.ಬಿ.ರಾಘವೇಂದ್ರ ಮಾತನಾಡಿ, ಸಿದ್ದರಾಮಯ್ಯ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ದಲಿತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ದಲಿತ ಮುಖ್ಯಮಂತ್ರಿ ಮಾಡುವ ಹಾದಿ ತಪ್ಪಿಸಿದ ರಾಜಕಾರಣಿ. ದಲಿತಪರ ಎಂದು ಗೋಮುಖವಾಡ ಹಾಕಿಕೊಂಡ ಮತಕ್ಕಾಗಿ ಬೇಡುವ ವ್ಯಕ್ತಿಯಾಗಿದ್ದಾರೆ. ಕೂಡಲೇ ಸಿದ್ದರಾಮಯ್ಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಮಂಡಲ ಕಾರ್ಯದರ್ಶಿಗಳಾದ ಶಂಕರ್ ಮೇಟಿ, ಜೀವರತ್ನಂ, ಮುಖಂಡರಾದ ಮಧುಸೂದನ್, ಚೈತ್ರಾ, ರೇಷ್ಮಾ, ಶಿವಶಂಕರ್, ಸಣ್ಣತಾಯಪ್ಪ ಮಲ್ಲಪ್ಪ, ಪರಶುರಾಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net