

ವಿಜಯವಾಣಿ ಸುದ್ದಿಜಾಲ ಗದಗ
ಶಿಕ್ಷಣದ ಮೂಲಕ ಸಾಮಾಜಿಕ ಸೇವೆಗೆ ಆಧ್ಯತೆ ನೀಡುತ್ತಿರುವ ಶ್ರೀಮಠವು ನಿತ್ಯವು ಕ್ರಿಯಾತ್ಮಕ, ವಿದಾಯಿಕ ಕೆಲಸಗಳ ಮೂಲಕ ಭಕ್ತರ ಬದುಕಿಗೆ ಮಾರ್ಗದರ್ಶನ ನೀಡುವ ಮಹಾಮನೆಯಾಗಿ ರೂಪಗೊಳ್ಳುತ್ತಲಿದೆ ಎಂದು ತಾಲೂಕಿನ ಹೊಸಳ್ಳಿ ಗ್ರಾಮದ ಬೂದೀಶ್ವರ ಶ್ರೀಗಳು ಹೇಳಿದರು.
ಹೊಸಳ್ಳಿ ಗ್ರಾಮದಲ್ಲಿ ಜರುಗಿದ ಮಠದ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಸಮಾಜಮುಖಿ ಸೇವೆಗೆ ಮಠವು ಸದಾಕಾಲ ಸ್ಪಂದಿಸುತ್ತದೆ ಎಂದು ನುಡಿದರು.
ಬೂದಿಶಿವಯೋಗಿಗಳ ಕತೃ ಶಕ್ತಿ ಅಪಾರವಾಗಿದೆ. ಸರ್ವಧರ್ಮ ಸರ್ವಜನಾಂಗವೆಲ್ಲವನ್ನು ಕಾರುಣ್ಯ ದೃಷ್ಟಿಯಿಂದ ಹರಿಸಿದ ಮಹಿಮಾಪುರುಷರು. ಮಾನುಕುಲದ ಶಾಂತಿ ಸಮಾಧಾನ ಸಮೃದ್ಧಿಗೆ ತಮ್ಮ ತಪೋಶಕ್ತಿಯನ್ನು ಮೀಸಲಾಗಿಟ್ಟ ಬಸವಯುಗ ಮಹಾಶರಣರು ಎಂದು ಬೂದಿಶ್ವರ ಶ್ರೀಗಳು ಹೇಳಿದರು
ಜಾತ್ರಾಮಹೋತ್ಸವದ ಸಾನ್ನಿಧ್ಯ ವಹಿಸಿದ ಹೊಳೆಹುಚ್ಚೇಶ್ವರ ಮಠದ ಹುಚ್ಚೇಶ್ವರ ಶ್ರೀಗಳು ಮಾತನಾಡಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜಮುಖಿಯಾಗಿ ಬೂಧಿಶ್ವರ ಮಠವು ಭಕ್ತರಿಗೆ ಸದ್ಭೋಧನೆ, ಸಚ್ಚಾರಿತ್ರ್ಯ, ಸಂಸ್ಕಾರ ನೀಡುವ ಗುರುಪೀಠವಾಗುತ್ತಿದೆ ಎಂದು ತಿಳಿಸಿದರು.
ನೀಲಗುಂದ ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು ಮಾತನಾಡಿ, ಬೂದೀಶ್ವರ ಶ್ರೀಗಳು ತಮ್ಮ ಪೀಠಾಧಿಕಾರದ ಎರಡು ದಶಕಗಳ ಅವಧಿಯಲ್ಲಿ ಶ್ರೀಮಠಕ್ಕೆ ಭವ್ಯವಾದ, ದಿವ್ಯವಾದ ಸ್ವರೂಪವನ್ನು ನೀಡಿದ್ದಾರೆ. ಬಯಲಿನಲ್ಲಿದ್ದ ಮಠವನ್ನು ಮನಮೋಹಕ ಶಿಲ್ಪಕಲಾಕೃತಿಯನ್ನಾಗಿ ಮಹಾ ಧರ್ಮಸೌಧವನ್ನಾಗಿ ರೂಪಿಸಿದ ಮಹಾಶಿಲ್ಪಿಯಾಗಿದ್ದಾರೆಂದು ನುಡಿದರು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಶರಣಬಸವ ವೆಂಕಟಾಪೂರ ಅವರಿಗೆ "ಬೂದೀಶ್ವರ ಸಂಸ್ಥಾನ ಮಠದ ಗುರುಕಾರುಣ್ಯ ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ಮುನವಳ್ಳಿಯ ಸೋಮಶೇಖರಮಠದ ಮುರುಂದ್ರ ಶ್ರೀಗಳು, ಕುಂದರಗಿಯ ಅಂಕಲಮಠದ ಅಮರೇಶ್ವರ ಶ್ರೀಗಳು, ಬಸವರಾಜ ತಿರ್ಲಾಪೂರ, ಟಿ.ವಿ. ರೋಣದ ಇತರರು ಇದ್ದರು,
ಬಾಕ್ಸ್:
ಬೂದೀಶ್ವರ ಜಾತ್ರಾಮಹೋತ್ಸವದ ಅಂಗವಾಗಿ ವಿವಿಧ ಧಮಿರ್ಯರ 25 ಸಾಮೂಹಿಕ ವಿವಾಹಮಹೋತ್ಸವ ಜರುಗಿತು. ನೂತನ ದಂಪತಿಗಳಿಗೆ ಬೂದೀಶ್ವರ ಶ್ರೀಗಳು ಅಕ್ಷತೆಯನ್ನು ಆಶೀರ್ವದಿಸಿ ಮಂಗಲಕಾರ್ಯಕ್ಕೆ ಶ್ರೀರೆ ನೀಡಿದರು. ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ವಿವಾಹ ಮಹೋತ್ಸವದಲ್ಲಿ ಹಾಗೂ ಬೂದೀಶ್ವರರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.