ದೈಹಿಕ, ಮಾನಸಿಕ ಕ್ಷಮತೆಗೆ ಕ್ರೀಡೆ ಸಹಕಾರಿ

hosakote sports
Published on

ವಿಜಯವಾಣಿ ಸುದ್ದಿಜಾಲ ನಂದಗುಡಿ
ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ಕಾರ್ಯಕ್ಷಮತೆ ಹೆಚ್ಚಾಗಲು ಕ್ರೀಡೆಗಳು ಸಹಕಾರಿ. ಆದ್ದರಿಂದ ಸ್ಫರ್ಧೆಗಳಲ್ಲಿ ಸೋಲು-ಗೆಲುವನ್ನು ಪರಿಗಣಿಸದೆ ಪಾಲ್ಗೊಳ್ಳಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೋಬಳಿಯ ಶಿವನಾಪುರದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು.
ಗ್ರಾಮೀಣ ವಿದ್ಯಾರ್ಥಿಗಳಿಗೆ ಸೂಕ್ತ ಸೌಲಭ್ಯ, ಮಾರ್ಗದರ್ಶನವಿಲ್ಲದಿದ್ದರೂ ಅಸಾಧಾರಣ ಶಕ್ತಿ, ಸಾಮರ್ಥ್ಯವಿದ್ದು, ಈ ಬಗ್ಗೆ ವಿಶ್ವಾಸ ಬೆಳೆಸಿಕೊಂಡು, ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧಿಸಬೇಕು ಎಂದರು.
ಬಿಇಒ ಮುನಿಲಕ್ಷ್ಮಯ್ಯ ಮಾತನಾಡಿ, ವಿಶ್ವವಿಖ್ಯಾತ ಆಟಗಾರರನ್ನು ಆದರ್ಶವನ್ನಾಗಿಟ್ಟುಕೊಂಡು ಶೈಕ್ಷಣಿಕ ಪ್ರಗತಿಯ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಓದಿನ ಕಡೆಗೆ ಹೆಚ್ಚು ಗಮನಹರಿಸುತ್ತಿರುವ ಪರಿಣಾಮ ಸಾಕಷ್ಟು ಕ್ರೀಡೆಗಳು ತೆರೆಮರೆಗೆ ಸರಿಯುತ್ತಿವೆ ಎಂದರು.
ಸಮಾಜ ಸೇವಕರಾದ ಕೆ.ಎಸ್.ಮಹದೇವಯ್ಯ, ಎಂ.ಮಂದೀಪ್ ಗೌಡ, ಶಿವನಾಪುರ ಗ್ರಾಪಂ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್ ಹಾಗೂ ಶಾಲಾ ಬ್ಯಾಗ್ ವಿತರಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಮುನಿಶಾಮಣ್ಣ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಧರ್ಮೇಶ್, ಜಿಪಂ ಮಾಜಿ ಸದಸ್ಯ ಕಲ್ಲಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಲ್.ಎನ್.ಟಿ.ಮಂಜುನಾಥ್, ತಾಪಂ ಮಾಜಿ ಸದಸ್ಯರಾದ ಬೀರಪ್ಪ, ಯರ‌್ರೇಗೌಡ, ವೆಂಕಟೇಶ್, ಸಮಾಜ ಸೇವಕ ಪಿ.ಕಲ್ಲಪ್ಪ, ಎಸ್‌ಎಫ್‌ಸಿಎಸ್ ನಿರ್ದೇಶಕ ದೊಡ್ಡಮನೆ ರಮೇಶ್, ಗ್ರಾಪಂ ಮಾಜಿ ಅಧ್ಯಕ್ಷ ಆರ್.ರವಿಕುಮಾರ್, ಸದಸ್ಯರಾದ ತಮ್ಮಣ್ಣಗೌಡ, ಚಂದ್ರಶೇಖರ್, ಎಸ್.ಪಿ.ರಾಜಣ್ಣ, ರವಿಚಂದ್ರ, ಎನ್.ಎನ್.ಮಂಜುನಾಥ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net