ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಕರಿಗೆ ತರಬೇತಿ

hosakote pressmeet
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ನವೀನ ಪ್ರಯೋಗದ ಜತೆ ಶಿಕ್ಷಕರಿಗೆ ಉತ್ತಮ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾ ಕೇಂದ್ರದ ಕಾರ್ಯದರ್ಶಿ ನಾಗರಾಜ್ ಗುಪ್ತಾ ತಿಳಿಸಿದರು.
ನಗರದ ಸ್ವಾಮಿ ವಿವೇಕಾನಂದ ವಿದ್ಯಾ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಶೇಷ ಬದಲಾವಣೆಗೆ ಸತ್ಯ ಎಜುಕೇರ್ ಎನ್‌ಜಿಒ ಸಹಕಾರ ಉತ್ತಮವಾಗಿದ್ದು, ಶಾಲೆಯಲ್ಲಿ ಶೈಕ್ಷಣಿಕ ಗುಣಮಟ್ಟ ಹಾಗೂ ಕಲಿಕೆಯಲ್ಲಿ ವಿದ್ಯಾರ್ಥಿಗಳಿಗೆ ನೂತನ ಪದ್ಧತಿ ಅಳವಡಿಕೆ ಮಾಡಿಕೊಳ್ಳುವ ಮೂಲಕ ಉತ್ತಮ ಲಿತಾಂಶದ ಜತೆ ಪಾಲಕರಲ್ಲೂ ಹೆಚ್ಚಿನ ಉತ್ಸಾಹ ಕಂಡು ಬಂದಿದೆ ಎಂದರು.
ವಿದ್ಯಾರ್ಥಿಗಳು ಪಠ್ಯ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ವಿಶೇಷವಾಗಿ ಭಾಗವಹಿಸಲು ಪ್ರೇರೇಪಿಸಲು ಸತ್ಯ ಎಜುಕೇರ್ ಸಂಸ್ಥೆಯಿಂದ ಶಾಲೆಯ ಪ್ರತಿ ಶಿಕ್ಷಕರಿಗೆ ವಿಶೇಷ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಇದು ಮಕ್ಕಳ ಕಲಿಕೆಗೆ ಪ್ರಯೋಜನಕಾರಿಯಾಗಿದೆ ಎಂದರು.
ಹಾಗೆಯೇ, ಗ್ರಂಥಾಲಯಗಳತ್ತ ಮಕ್ಕಳನ್ನು ಸೇಳೆಯುವ ನಿಟ್ಟಿನಲ್ಲಿ ನೂತನ ಪ್ರಯೋಗ ಮಾಡಿದ್ದು, ಪಠ್ಯ ಪುಸ್ತಕ ಓದುವುದು, ಇತಿಹಾಸದ ಪ್ರಸಿದ್ಧ ವ್ಯಕ್ತಿಗಳ ಜೀವನ ಚರಿತ್ರೆ ಅಧ್ಯಯನ, ನೂತನ ಅವಿಷ್ಕಾರದ ಬಗ್ಗೆ ಆಸಕ್ತಿ ಮೂಡುತ್ತಿದ್ದು, ಇದರಿಂದ ಮಕ್ಕಳು ಮೊಬೈಲ್ ಗೀಳಿನಿಂದ ದೂರ ಉಳಿಯಲಿದ್ದಾರೆ. ಇದರಿಂದ ಶಾಲಾ ಅವಧಿ ಮುಗಿದರೂ ಹೆಚ್ಚುವರಿ ಸಮಯ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುವುದನ್ನು ಕಾಣುತ್ತಿದ್ದೇವೆ ಎಂದರು.
ಮಕ್ಕಳಲ್ಲಿನ ಕಲಿಕೆಯ ಸಾಮರ್ಥ್ಯ ತಿಳಿದು, ಅವರಿಗೆ ಬೇಕಾದ ರೀತಿಯಲ್ಲಿ ಮನವರಿಕೆಯ ಪದ್ಧತಿಯಲ್ಲಿ ಬೋಧನೆಗೆ ಒತ್ತು ನೀಡಲಾಗಿದೆ. ಜತೆಯಲ್ಲಿ ಶಾಲೆಯ ಶಿಕ್ಷಕರಿಗೆ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಲು ಹಾಗೂ ಗುಣಮಟ್ಟದ ತರಬೇತಿ ನೀಡುತ್ತಿದ್ದು, ಇದರಿಂದ ಲಿತಾಂಶ ಉತ್ತಮವಾಗಿದ್ದು, ಶಾಲೆ ಬಗ್ಗೆ ಪಾಲಕರಲ್ಲಿಯೂ ಹೆಚ್ಚಿನ ಉತ್ಸಾಹ ಮೂಡಿದೆ ಎಂದರು.
ತಂತ್ರಜ್ಞಾನದ ಬಳಕೆಯಿಂದ ವಿಶಿಷ್ಟ ರೀತಿಯಲ್ಲಿ ತರಬೇತುದಾರಿಂದ ಕಂಪ್ಯೂಟರ್ ತರಬೇತಿ ನೀಡಲು ಸಂಸ್ಥೆ ಸಹಕಾರ ನೀಡಿದ್ದು, ಮುಂದಿನ ದಿನಗಳಲ್ಲಿ ಗಣಿತ ಸಂಶೋಧನಾ ಕೇಂದ್ರ ಹಾಗೂ ನೂತನ ತಂತ್ರಜ್ಞಾನ ಕಲಿಕಾ ಲ್ಯಾಬ್ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು ಎಂದರು.
39 ವರ್ಷಗಳ ಹಿಂದೆ ಕೇವಲ 8 ವಿದ್ಯಾರ್ಥಿಗಳಿಂದ ಪ್ರಾರಂಭಿಸಲಾಗಿದ್ದ ಶಾಲೆಯ ಅಭಿವೃದ್ಧಿಗೆ ಹಲವು ಸಂಘ-ಸಂಸ್ಥೆಗಳು ಸಹಕಾರ ನೀಡಿದ ಕಾರಣ ಎರಡು ಸಾವಿರ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಶಕ್ತಿ ಬಂದಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net