ಭೂಪತಮ್ಮದೇವಿ ಕುಂಭಾಭಿಷೇಕ

hoakote kumbabbisheka
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಪ್ರಕೃತಿ ಮಡಿಲು ಗುಟ್ಟದ ಮೇಲಿನ ಶ್ರೀ ಭೂಪತಮ್ಮ ದೇವಿ ದೇವಾಲಯದಲ್ಲಿ ಪೂಜಾ ಕೈಂಕರ್ಯಲ್ಲಿ ಭಾಗವಹಿಸಲು ಪುಣ್ಯ ಮಾಡಿದ್ದು, ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ತಾಲೂಕಿನ ಹರಳೂರು ಸಪ್ತಮಾತೃಕೆಯರ ಗುಟ್ಟದಲ್ಲಿರುವ ಗ್ರಾಮದೇವತೆ ಶ್ರೀ ಭೂಪತಮ್ಮ ದೇವಾಲಯದ ನೂತನ ವಿಮಾನ ಗೋಪುರ, ದ್ವಜ ಸ್ಥಂಭ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿದರು.
ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ತಲತಲಾಂತರಗಳಿಂದ ಜಡಿಗೇನಹಳ್ಳಿ ಭಾಗದ ಭಕ್ತರು ದೇವಿಯನ್ನು ಪೂಜಿಸುತ್ತಾ ಬಂದಿದ್ದಾರೆ. ಈಗ ವಿಮಾನ ಗೋಪುರ ಹಾಗೂ ದ್ವಜಸ್ಥಂಭ ಪ್ರತಿಷ್ಠಾಪನೆ ಮಾಡಿ ಕುಂಭಾಭಿಷೇಕ ಕಾರ್ಯಕ್ರಮವನ್ನು ನೆರವೇರಿಸಿದ್ದು, ಸಂತಸ ತಂದಿದೆ ಎಂದರು.
ತಹಸೀಲ್ದಾರ್ ವಿಜಯ್ ಕುಮಾರ್, ಮುಖಂಡರಾದ ಸುರೇಶ್, ನರೇಂದ್ರ, ಜಡಿಗೇನಹಳ್ಳಿಯ ವೆಂಕಟಪ್ಪ, ಕೃಷ್ಣಪ್ಪ, ರಾಮಕೃಷ್ಣಪ್ಪ, ರಾಜಣ್ಣ, ಹರಳೂರಿನ ವರದರಾಜ್, ನಂಜುಂಡೇಗೌಡ, ಎಚ್.ಎಸ್.ರವಿ, ರಘು, ಕೆಂಪಣ್ಣ, ಅಶ್ವತ್ಥಪ್ಪ, ಮುನಿರಾಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net