

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಮಾಕನಹಳ್ಳಿಯಲ್ಲಿ 42ನೇ ವರ್ಷದ ಮುತ್ಯಾಲಮ್ಮ ದೇವಿ ಹಾಗೂ ಶ್ರೀಧರ್ಮರಾಯಸ್ವಾಮಿ ದ್ರೌಪತಾಂಬ ಕರಗ ಮಹೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಂಪನ್ನವಾಯಿತು.
ಕರಗ ಮಹೋತ್ಸವದ ಪ್ರಯುಕ್ತವಾಗಿ ಮೂರು ದಿನಗಳ ಕಾಲ ಮುತ್ಯಾಲಮ್ಮ ದೇವಿ ಪಲ್ಲಕ್ಕಿ ಉತ್ಸವ, ಗಣಪತಿ ಪಲ್ಲಕ್ಕಿ ಉತ್ಸವ, ವೀರಭದ್ರಸ್ವಾಮಿ ಪಲ್ಲಕ್ಕಿ ಉತ್ಸವ, ಸಫಲಮ್ಮ ದೇವಿ ಪಲ್ಲಕ್ಕಿ ಉತ್ಸವ, ಕರಗದಮ್ಮ, ಮಾರಮ್ಮ, ನರಸಿಂಹಸ್ವಾಮಿ, ರಾಮದೇವರು, ರೇಣುಕಾಯಲ್ಲಮ್ಮ, ಕತ್ತಿಮಾರಮ್ಮ, ಮುನೇಶ್ವರ ಸ್ವಾಮಿಗಳ ಪಲ್ಲಕ್ಕಿ ಉತ್ಸವ ಮಾಡಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಕರಗ ಹೊತ್ತು ಮೆರವಣಿಗೆ ಮಾಡಿ ಕರಗ ಮಹೋತ್ಸವ ಯಶಸ್ವಿ ಮಾಡಲಾಯಿತು.
ಮಾಕನಹಳ್ಳಿ ಕರಗ ಮಹೋತ್ಸವ ದ್ವಾಪರಯುಗದ ಜನಮೇಜರಾಜಿನಿಂದ ಆರಂಭಗೊಂಡು ದೇಗುಲಗಳ ಸ್ಥಾಪನೆಯು ಶ್ರೀರಾಜ ಕುಲಶೇಖರ ಆಳ್ವರ್ ವಹ್ನಿಯವರ ಆಳ್ವಿಕೆಯಲ್ಲಿ ರಾಜೇಂದ್ರ ಚೋಳನು ಶಕ್ತಿ ದೇವತೆಗಳನ್ನು 900 ವರ್ಷಗಳ ಹಿಂದೆ ನಿರ್ಮಿಸಿದ್ದು, ಅಂದು ಮುತ್ಯಾಲಪುರಿ ಎಂದಿದ್ದ ಗ್ರಾಮ, ಬಳಿಕ ಮಾಕನಹಳ್ಳಿ ಎಂದು ನಾಮಾಂಕಿತವಾಗಿ ಕರೆಯಲ್ಪಟ್ಟಿದೆ ಎಂದು ಉಲ್ಲೇಖಿಸಲಾಗಿದೆ. ಅಂದಿನಿಂದ ಪ್ರತಿ ವರ್ಷ ಶ್ರದ್ದಾಭಕ್ತಿಯಿಂದ ಕರಗ ಮಹೋತ್ಸವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದು ಧರ್ಮದರ್ಶಿ ರಾಜಣ್ಣ ತಿಳಿದರು.