ಹೊಸಹುಡ್ಯ ಜಂಟಿ ಸರ್ವೇ ಪೂರ್ಣ

Hosahudya
Published on

ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ ಅಧಿಕಾರಿಗಳು

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಹೊಸಹುಡ್ಯ ಗ್ರಾಮದ ಅರಣ್ಯ ಇಲಾಖೆ ಜಾಗವನ್ನು ಹೈಕೋರ್ಟ್ ಆದೇಶದಂತೆ 2 ದಿನಗಳಿಂದ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಕೈಗೊಂಡಿದ್ದ ಜಂಟಿ ಸರ್ವೇ ಗುರುವಾರ ಸಂಜೆ ಮುಕ್ತಾಯಗೊಂಡಿತು.

ಆದರೆ, ಅರಣ್ಯ ಇಲಾಖೆ ಭೂಮಿ ಒತ್ತುವರಿಯಾಗಿದೆ ಎಂದು ಹೇಳುತ್ತಿದ್ದರೆ, ಕಂದಾಯ ಇಲಾಖೆ ಒತ್ತುವರಿ ಆಗಿದೆ ಎನಿಸುತ್ತಿಲ್ಲ ಎಂದಿರುವುದು ಮತ್ತೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಗಿದೆ.

ವಾಜಿ ಸ್ಪೀಕರ್ ರಮೇಶ್‌ಕುವಾರ್ ಒತ್ತುವರಿ ವಾಡಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶದಂತೆ ಬುಧವಾರ ಮತ್ತು ಗುರುವಾರ ಸರ್ವೇ ಕಾರ್ಯ ನಡೆಸಲಾಗಿದ್ದು, ರಮೇಶ್‌ಕುವಾರ್ ಎರಡೂ ದಿನವೂ ಸರ್ವೇಗೆ ಸಹಕರಿಸಿ ತೋಟದಲ್ಲಿ ಮೊಕ್ಕಾಂ ಹೂಡಿದ್ದರು.

ಸರ್ವೇ ನಂ.1, 2ರಲ್ಲಿ ಒತ್ತುವರಿ: ಬ್ರಿಟಿಷ್ ಸರ್ಕಾರದ ಕಾಲದಿಂದ ಸರ್ವೇಗೆ ಗುಂಟರ್ಸ್ ಚೈನ್ ಬಳಕೆ ಆಗುತ್ತಿದೆ. ಈ ಚೈನ್ ಮೂಲಕವೇ ಅಳತೆ ವಾಡುವುದು ಸೂಕ್ತ ಎಂದು ಅರಣ್ಯ ಇಲಾಖೆ ಅಧೀನಕಾರ್ಯದರ್ಶಿ ಅವರೇ ಹೇಳಿದ್ದು, ಅಂತೆಯೇ ಅಳತೆ ವಾಡಲಾಗಿದೆ. ಹೊಸಹುಡ್ಯ ಸರ್ವೇ ನಂ.1 ಹಾಗೂ 2ರಲ್ಲಿ ಒತ್ತುವರಿಯಾಗಿದೆ. ಅರಣ್ಯ ಸೆಟ್ಲ್‌ಮೆಂಟ್ ವ್ಯಾಪ್ ನಮ್ಮ ಬಳಿ ಇದೆ. ಯಾವಾಗ ಬೇಕಾದರೂ ವ್ಯಾಪನ್ನು ಸಿದ್ಧಪಡಿಸಬಹುದು. ಒತ್ತುವರಿ ಆಗಿರುವುದು ನಿಜ. ಡಿಡಿಎಲ್‌ಆರ್ ಕೊಡುವ ರಿಪೋರ್ಟ್ ನೋಡಿ ಮುಂದಿನ ತೀರ್ವಾನ ವಾಡುತ್ತೇವೆ. ಸರ್ವೇ ನಂ.1 ಹಾಗೂ 2ರಲ್ಲಿ ನಮ್ಮ ಅರಣ್ಯ ಭೂಮಿ ಜಾಗ ಸೇರಿದ್ದರೆ ವಾತ್ರ ಸಹಿ ಹಾಕುತ್ತೇನೆ. ಇಲ್ಲವಾದರೆ ಡಿಡಿಎಲ್‌ಆರ್ ವರದಿಗೆ ಸಹಿ ಹಾಕುವುದಿಲ್ಲ ಎಂದು ಕೋಲಾರದ ಡಿ.ಸಿ.ಎಫ್.ಸರೀನಾ ವಾಹಿತಿ ನೀಡಿದರು.

ಮೇಲ್ನೋಟಕ್ಕೆ ಒತ್ತುವರಿ ಕಂಡುಬಂದಿಲ್ಲ!: ಕಳೆದ 2 ದಿನಗಳಿಂದ ಜಂಟಿ ಸರ್ವೇ ನಡೆಸಲಾಗಿದೆ. ರೋವರ್ ಜತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೇ ವಾಡಲಾಗಿದೆ. ಅರಣ್ಯ ಇಲಾಖೆಯ ಗುಂಟರ್ಸ್ ಚೈನ್ ವಾಪನ 100 ಲಿಂಕ್ 66 ಅಡಿ. ಕಂದಾಯ ಇಲಾಖೆಯ ಚೈನ್‌ನಲ್ಲಿ 50 ಲಿಂಕ್ 30 ಅಡಿಯಾಗಿದೆ. ಸರ್ವೇ ನಂ.1ರಲ್ಲಿ 315 ಎಕರೆ ಹಾಗೂ ಸರ್ವೇ ನಂ.2 ರಲ್ಲಿ 113 ಎಕರೆ ಗುರುತಿಸಲು ನೋಟಿಫಿಕೇಷನ್ ಇದ್ದು, ಡಿಡಿಎಲ್‌ಆರ್‌ನಲ್ಲಿ ತಾಂತ್ರಿಕ ವರದಿ ನೀಡಬೇಕಿದೆ. ರಮೇಶ್‌ಕುವಾರ್ ಅವರು ಸಹ ಕೆಲವು ವಾಹಿತಿ ಕೇಳಿದ್ದಾರೆ. ಜತೆಗೆ ಸರ್ವೇ ಸ್ಕೆಚ್ ವರದಿ ಬಂದ ನಂತರ ಜ.30ರ ಒಳಗಾಗಿ ಹೈಕೋರ್ಟ್‌ಗೆ ವರದಿ ಸಲ್ಲಿಸುತ್ತೇವೆ ಎಂದ ಜಿಲ್ಲಾಧಿಕಾರಿ ಎಂ.ಆರ್.ರವಿ, 1934ರಲ್ಲಿ ಸರ್ಕಾರಿ ನೋಟಿಫಿಕೇಷನ್ ಹಾಗೂ 1034ರ ಗೆಜೆಟೆಡ್ ಬಿಟ್ಟು ಅರಣ್ಯ ಇಲಾಖೆ ಯಾವುದೇ ದಾಖಲೆಯನ್ನು ಕಂದಾಯ ಇಲಾಖೆಗೆ ಕೊಟ್ಟಿಲ್ಲ. ಆದ ಕಾರಣ ಒತ್ತುವರಿ ಮೇಲ್ನೋಟಕ್ಕೆ ನಮಗೆ ಏನೂ ಕಂಡುಬಂದಿಲ್ಲ ಎಂದು ಎನಿಸುತ್ತಿದೆ ಎಂದರು.

2010 ಮತ್ತು 2013ರಲ್ಲಿ ಸರ್ವೇ ಆದ ಸಂದರ್ಭದಲ್ಲಿ ಗುಂಟರ್ಸ್ ಚೈನ್ ಮೂಲಕವೇ ಸರ್ವೇ ವಾಡಬೇಕೆಂಬ ವಾದ ವಾಡಲಾಗಿತ್ತು. ಇದನ್ನು ಭೂದಾಖಲೆಗಳ ಇಲಾಖೆಗೂ ನಮ್ಮ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಗುಂಟರ್ಸ್ ಚೈನ್ ಸರ್ವೇ ಕರ್ನಾಟಕಕ್ಕೆ ವಾತ್ರ ಸೀಮಿತವಾಗಿಲ್ಲ. ದೇಶದ ಎಲ್ಲ ಕಡೆ ಅರಣ್ಯ ಇಲಾಖೆ ಇದನ್ನೇ ಬಳಸಲಾಗುತ್ತಿದೆ. ಹೊಸಹುಡ್ಯ ಸರ್ವೇ ನಂ.1 ಮತ್ತು 2 ಅರಣ್ಯ ಒಳಗಡೆಯೇ ಇದೆ. ಸರೀನಾ ಡಿ.ಸಿ.ಎಫ್ ಹೈಕೋರ್ಟ್ ಆದೇಶದಂತೆಯೇ ಕಂದಾಯ ಇಲಾಖೆ ನಿಯವಾನುಸಾರ ಸರ್ವೇ ವಾಡಲಾಗಿದೆ. ಈ ಬಾರಿ ಗುಂಟರ್ಸ್ ರೋವರ್ ಚೈನ್ ಬಳಸಿ ಸರ್ವೇ ನಡೆಸಲಾಗಿದೆ. ಸದ್ಯಕ್ಕೆ ಒತ್ತುವರಿ ಆಗದೆ ಎನಿಸುತ್ತಿಲ್ಲ. ಎಂ.ಆರ್.ರವಿ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net