ಚರಂಡಿಗಿಳಿದು ಸ್ವಚ್ಛಗೊಳಿಸುವೆ ಎಂದ ಶಾಸಕ

GOOLIHATTI SHEKAR
Published on

ಹೊಸದುರ್ಗ: ಗ್ರಾಮದ ಚರಂಡಿಗಳನ್ನು ಶುಚಿಗೊಳಿಸದಿದ್ದರೆ ಚರಂಡಿಗಿಳಿದು ನಾನೇ ಆ ಕೆಲಸ ಮಾಡುವೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಚ್ಚರಿಸಿದರು.

ತಾಲೂಕಿನ ಚಿಕ್ಕಬ್ಯಾಲದಕೆರೆ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಚರಂಡಿಗಳಲ್ಲಿ ನೀರು ನಿಲ್ಲಕೂಡದು. ಒಂದು ವೇಳೆ ಜನಾರೋಗ್ಯಕ್ಕೆ ತೊಂದರೆ ಆದರೆ ಸುಮ್ಮನಿರುವುದಿಲ್ಲ ಎಂದು ಅಧಿಕಾರಿಗಳ ವಿರುದ್ಧ ಗುಡುಗಿದರು. ಚರಂಡಿಗಳನ್ನು ನಿಗದಿತ ಸಮಯಕ್ಕೆ ಸ್ವಚ್ಛಗೊಳಿಸಬೇಕು. ಮತ್ತೆ ಗ್ರಾಮಕ್ಕೆ ಭೇಟಿ ನೀಡಿದಾಗ ಸ್ವಚ್ಛತೆ ಇರದಿದ್ದರೆ ನಾನೇ ಸ್ವಚ್ಛಗೊಳಿಸುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net