ಪರಸ್ಪರ ಅಂತರದೊಂದಿಗೆ ದೇವರ ದರ್ಶನ

Terumalleshwara 03
Published on

ಹೊಸದುರ್ಗ: ತಾಲೂಕಿನ ಎಲ್ಲ ದೇಗುಲಗಳಲ್ಲಿ ಕೇಂದ್ರದ ಮಾರ್ಗಸೂಚಿಯಂತೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಸೋಮವಾರ ಅನುಕೂಲ ಕಲ್ಪಿಸಲಾಗಿತ್ತು.

ಎಲ್ಲೆಡೆ ಪರಸ್ಪರ ಅಂತರದ ಜತೆಗೆ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸೇಷನ್ ಮಾಡಿ ದೇಗುಲದ ಒಳಗೆ ಬಿಡಲಾಯಿತು. ಹಲವು ದೇವಸ್ಥಾನಗಳನ್ನು ತೆರೆದಿದ್ದವಾದರೂ ಇಲ್ಲಿಗೆ ಬರುವ ಭಕ್ತರ ಸಂಖ್ಯೆ ಕ್ಷೀಣವಾಗಿತ್ತು.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ದೈಹಿಕ ಅಂತರದೊಂದಿಗೆ ಭಕ್ತರು ದೇವರ ದರ್ಶನ ಮಾಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಪ್ರಸಾದ ವ್ಯವಸ್ಥೆ ನಿಲ್ಲಿಸಿದ್ದೇವೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net