ಗೋವರ್ಧನಗಿರಿಯಲ್ಲಿ ಅಂಬಾದೇವಿ ಬ್ರಹ್ಮ ರಥೋತ್ಸವ

hsd ambadevi jatre 09 p3
Published on

ಹೊಸದುರ್ಗ; ತಾಲೂಕಿನ ಕುಂದೂರು ಗೊಲ್ಲರಹಟ್ಟಿಯ ಸುಕ್ಷೇತ್ರ ಗೋವರ್ಧನಗಿರಿ ಜಗದಾಂಬ ಸಂಸ್ಥಾನ ಮಠದಲ್ಲಿ ಭಾನುವಾರ ಶ್ರೀ ಅಂಬಾದೇವಿ ಅಮ್ಮನವರ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರುಗಿತು.

ರಥೋತ್ಸವಕ್ಕೆ ಪೂರ್ವಭಾವಿಯಾಗಿ ಗೋವರ್ಧನಗಿರಿ ಜಗದಾಂಬ ಸಂಸ್ಥಾನ ಮಠದಲ್ಲಿ ಶನಿವಾರ ಮುಂಜಾನೆ ಧ್ವಜಾರೋಹಣ, ಶ್ರೀ ತಿರುಮಲ ಸ್ವಾಮಿ, ಅಂಬಾದೇವಿಗೆ ಮಹಾಭಿಷೇಕ ನಡೆಸಲಾಯಿತು. ನಂತರ ಕಂಕಣಧಾರಣೆ, ಕಲಶ ಮಹೋತ್ಸವ ನಡೆಯಿತು.

ಭಾನುವಾರ ಬೆಳಗ್ಗೆ ಜಗದಾಂಬ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ತಿಮ್ಮಪ್ಪ ಸ್ವಾಮಿಗಳ ಪೀಠಾರೋಹಣ ಹಾಗೂ ಕಿರೀಟಧಾರಣೆ ಮಹೋತ್ಸವ ನೆರವೇರಿತು. ಸಂಜೆ ದೇವಾಲಯದಿಂದ ಮೆರವಣಿಗೆ ಮೂಲಕ ಅಮ್ಮನವರನ್ನು ಕರೆತಂದು ಬ್ರಹ್ಮ ರಥೋತ್ಸವ ನೆರವೇರಿಸಲಾಯಿತು.

ರಥವನ್ನು ಹೂವುಗಳ ಹೂಮಾಲೆಗಳು, ಬಣ್ಣ ಬಣ್ಣದ ಬಾವುಟಗಳಿಂದ ಅಲಂಕರಿಸಲಾಗಿತ್ತು. ಉತ್ಸವ ಆರಂಭಗೊಳ್ಳುತ್ತಿದಂತೆ ಭಕ್ತರು ರಥಕ್ಕೆ ಬಾಳೆಹಣ್ಣು ತೂರಿ ಭಕ್ತಿ ಸಮರ್ಪಿಸಿದರು. ನಂತರ ಮಹಾ ದಾಸೋಹ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net