ಮಹಿಳೆ ಮೇಲೆ ಹಲ್ಲೆ, ಆಭರಣ ದೋಚಿ ಪರಾರಿ

hsd darode prakarana 09 p3
Published on

ಹೊಸದುರ್ಗ: ತಾಲೂಕಿನ ಆಲಘಟ್ಟ ಗ್ರಾಮದ ತೋಟದಲ್ಲಿ ಸೋಮವಾರ ಮಧ್ಯಾಹ್ನ ಒಂಟಿ ಮಹಿಳೆಯ ಮೇಲೆ ದಾಳಿ ನಡೆಸಿರುವ ದರೋಡೆಕೋರರು, ಆಕೆಯ ಕಣ್ಣಿಗೆ ಖಾರದಪುಡಿ ಎರಚಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಆಲಘಟ್ಟದ ಪರಮಶಿವಯ್ಯ ಅವರ ಪತ್ನಿ ಸರ್ವಮಂಗಳಾ ಹಲ್ಲೆಗೆ ಒಳಗಾಗಿ ಚಿನ್ನಾಭರಣ ಕಳೆದುಕೊಂಡ ಮಹಿಳೆ. ಈಕೆ ಕೃಷಿ ಕೆಲಸದ ಮೇಲೆ ತೋಟಕ್ಕೆ ತೆರಳಿದ್ದಾಗ ಕುಡಿವ ನೀರು ಕೇಳುವ ನೆಪದಲ್ಲಿ ತೋಟಕ್ಕೆ ಬಂದ ದರೋಡೆಕೋರರು, ಏಕಾಏಕಿ ಆಕೆಯ ಮೇಲೆ ದಾಳಿ ನಡೆಸಿದ್ದಾರೆ. ನೆಲಕ್ಕೆ ಬಿದ್ದಾಗ ಕಣ್ಣಿಗೆ ಕಾರದ ಪುಡಿ ಎರಚಿ ಮಾಂಗಲ್ಯ ಸರ, ಕಿವಿಯೋಲೆ ಕಿತ್ತುಕೊಂಡು ಹೋಗಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಅಸ್ವಸ್ಥಗೊಂಡ ಸರ್ವಮಂಗಳಾ ಅವರನ್ನು ಹೊಸದುರ್ಗದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net