ಕರೊನಾ ನಿರ್ಮೂಲನೆಗೆ ವಜ್ರದಲ್ಲಿ ಪೂಜೆ

HSD gangarathi 21 file-1 (1)
Published on

ಹೊಸದುರ್ಗ: ತಾಲೂಕಿನ ಐತಿಹಾಸಿಕ ಪುಣ್ಯಕ್ಷೇತ್ರ ದಶರಥರಾಮೇಶ್ವರ ವಜ್ರದಲ್ಲಿ ಸೋಮವಾರ ರಾತ್ರಿ ಕರೊನಾ ಸಾಂಕ್ರಾಮಿಕ ರೋಗ ನಿವಾರಿಸುವಂತೆ ಪ್ರಾರ್ಥಿಸಿ ವಿಶೇಷ ಗಂಗಾರತಿ ನೆರವೇರಿಸಲಾಯಿತು.

ಶಾಸಕ ಗೂಳಿಹಟ್ಟಿ ಡಿ.ಶೇಖರ್ ನೇತೃತ್ವ ವಹಿಸಿದ್ದರು. ಗುಡ್ಡದನೆರಲಕೆರೆ ಗ್ರಾಮದಲ್ಲಿರುವ ದಶರಥರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶಾಸಕರ ಮನವಿಯಂತೆ ಪೂಜಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಂಗಾರತಿಗೆ ಪೂರ್ವಭಾವಿಯಾಗಿ ದಶರಥರಾಮೇಶ್ವರ ಸ್ವಯಂಭು ಲಿಂಗಕ್ಕೆ ಪೂಜೆ ಸಲ್ಲಿಸಲಾಯಿತು. ಸಂಕಲ್ಪ, ಬಿಲ್ವಾರ್ಚನೆ, ಅಷ್ಟೋತ್ತರ, ಮಹಾಮಂಗಳಾರತಿ ನೆರವೇರಿಸಲಾಯಿತು.

ದೇವಾಲಯದ ಮುಂಭಾಗದ ಗಂಗಾ ಕೊಳಕ್ಕೆ ಹೊಂದಿಕೊಂಡಿರುವ ಸೋಪಾನ ನಿರ್ಮಿಸಿರುವ ಗಂಗಾ ಕೊಳದಲ್ಲಿ ಗಂಗಾ ಕಳಶ ಸ್ಥಾಪಿಸಿ ನೂರೊಂದು ದೀಪ ಹಚ್ಚಿ ಮಂಗಳಾರತಿ ಸಲ್ಲಿಸಲಾಯಿತು. ಬಾಳೆಎಲೆ ಮೇಲೆ ನೂರೊಂದು ಕರ್ಪೂರ ದೀಪಗಳನ್ನು ಕೊಳದಲ್ಲಿ ತೇಲಿಬಿಡಲಾಯಿತು.

ಸಾಮಾಜಿಕ ಅಂತರ ನಿಯಮ ಪಾಲಿಸಲಾಗಿತ್ತು. ಎಪಿಎಂಸಿ ಅಧ್ಯಕ್ಷ ಎಚ್.ಸಿ.ಮಲ್ಲಿಕಾರ್ಜುನ್, ಗ್ರಾಪಂ ಸದಸ್ಯರಾದ ಕರಿಬಸಪ್ಪ, ನಾಗರಾಜು, ರಂಗಸ್ವಾಮಿ, ಧರ್ಮದರ್ಶಿ ಎನ್.ಕೆ.ರವಿ, ಶಿವಪ್ರಸಾದ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net