ಕಾಡುಗೊಲ್ಲರಿಗೆ ಎಂಎಲ್ಸಿ ಸ್ಥಾನ ಕೊಡಿ

SASALU SATHISH congress
Published on

ಹೊಸದುರ್ಗ: ತುಮಕೂರು, ಚಿತ್ರದುರ್ಗ ಸೇರಿ ರಾಜ್ಯದಲ್ಲಿ ಗಣನೀಯ ಜನಸಂಖ್ಯೆ ಹೊಂದಿರುವ ಕಾಡುಗೊಲ್ಲ ಸಮಾಜಕ್ಕೆ ಸೂಕ್ತ ರಾಜಕೀಯ, ಸಾಮಾಜಿಕ ಸ್ಥಾನಮಾನ ನೀಡುವಂತೆ ಕಾಡುಗೊಲ್ಲ ಸಮಾಜದ ಕಾರ್ಯದರ್ಶಿ ಟಿ.ರವೀಂದ್ರ ಒತ್ತಾಯಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ ಅವರು ಸಮಾಜದ ಮಹಿಳೆ ಜಯಮ್ಮ ಬಾಲರಾಜ್ ಅವರನ್ನು ವಿಧಾನಪರಿಷತ್ತಿಗೆ ಆಯ್ಕೆ ಮಾಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ್ದರು.

ಪ್ರಸ್ತುತ ಇವರ ಅವಧಿ ಮುಕ್ತಾಯಗೊಂಡಿದ್ದ ಸಮುದಾಯ ಮತ್ತು ಪಕ್ಷಕ್ಕೆ ನಿಷ್ಠೆ ಆಗಿರುವ ವ್ಯಕ್ತಿಗೆ ಈ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.

ಸಮಾಜದ ಮುಖಂಡ ಪದ್ಮನಾಭ್ ಮಾತನಾಡಿ, ತುಮಕೂರು, ಚಿತ್ರದುರ್ಗದಲ್ಲಿ ಹೆಚ್ಚಾಗಿರುವ ಕಾಡುಗೊಲ್ಲ ಸಮುದಾಯಕ್ಕೆ ರಾಜಕೀಯ ಪಕ್ಷಗಳು ಸೂಕ್ತ ಪ್ರಾತಿನಿಧ್ಯ ನೀಡುವಲ್ಲಿ ಸೋತಿವೆ. ಈ ಕೊರತೆ ನೀಗಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಲಕ್ಷಿ ್ಮೀಕಾಂತ, ಅಂಜಿನಪ್ಪ, ಕುರಿರಾಜಪ್ಪ, ನಿಜಲಿಂಗಪ್ಪ, ಗೌಡಪ್ಪ , ವಿಶ್ವನಾಥ್, ಜ್ಞಾನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net