ಕರೊನಾ ಕಟ್ಟೆಚ್ಚರದ ನಡುವೆ ಕುರಿ ಸಂತೆ

HSD januvaru santhe 18 file-1 (1)
Published on

ಹೊಸದುರ್ಗ: ಕರೊನಾ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸಂತೆ, ಸಭೆ, ಸಮಾರಂಭ ನಿರ್ಬಂಧಿಸಿ ಕಟ್ಟೆಚ್ಚರ ವಹಿಸಿದ್ದರೂ ರೈತರಿಗೆ ಮಾಹಿತಿ ಕೊರತೆ ಕಾರಣ ಪಟ್ಟಣದಲ್ಲಿ ಕುರಿ ಸಂತೆ ಬುಧವಾರ ನಿರಾತಂಕವಾಗಿ ನಡೆಯಿತು.

ಸ್ಥಳೀಯ ಎಪಿಎಂಸಿ ಆಡಳಿತ ಮಂಡಳಿ ಕುರಿ ಸಂತೆ ರದ್ದು ಮಾಡಿ ಆದೇಶ ಹೊರಡಿಸಿತ್ತಾದರೂ ಆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದೆ ಸುಮ್ಮನಾಯಿತು.

ಸಂತೆ ರದ್ದತಿ ಮಾಹಿತಿ ತಿಳಿಯದ ರೈತರು ಬುಧವಾರ ಬೆಳಗ್ಗೆ ಮಾಮೂಲಿಯಂತೆ ಹಳ್ಳಿಗಳಿಂದ ಬಂದು ಎಂಪಿಎಂಸಿ ಮುಂಭಾಗದ ಮುಖ್ಯರಸ್ತೆ ಬದಿ ಕುರಿ ಸಂತೆ ನಡೆಸಿದರು.

ಸೋಂಕು ತಡೆಗೆ ಸಂತೆ ನಡೆಸದಂತೆ ವಿಧಿಸಿದ ನಿರ್ಬಂಧ ಹೇರಿದ್ದ ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನಿದ್ದರು.

ಎಪಿಎಂಸಿ ಕಾರ್ಯದರ್ಶಿ ಈರಣ್ಣ ಹೇಳಿಕೆ: ಸಂತೆ ರದ್ದು ಮಾಡಿದ ಕುರಿತು ಪ್ರಕಟಣೆ ಹೊರಡಿಸಲಾಗಿತ್ತಾದರ ರೈತರು ಜಾನುವಾರುಗಳೊಂದಿಗೆ ಆಗಮಿಸಿದ್ದರು. ಎಪಿಎಂಸಿ ಪ್ರಾಂಗಣದಲ್ಲಿ ಸಂತೆಗೆ ಅವಕಾಶ ನೀಡದ ಕಾರಣ ರಸ್ತೆ ಬದಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net