

ಹೊಸದುರ್ಗ: ಅಜ್ಜಂಪುರ ಅಂಡರ್‌ಪಾಸ್ ಕಾಮಗಾರಿ ಅರಂಭಿಸುವ ಸಲುವಾಗಿ ಅಜ್ಜಂಪುರ-ಶಿವನಿ ಮಾರ್ಗದ ರೈಲು ಸಂಚಾರ ಸ್ಥಗಿತ ನಿರ್ಧಾರ ಕೈಬಿಟ್ಟು, ಬದಲಿ ಮಾರ್ಗ ನಿರ್ಮಾಣ ಮಾಡಿ ಭದ್ರಾ ಮೇಲ್ದಂಡೆ ಕಾಮಗಾರಿಗೆ ಚಾಲನೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ರೈಲ್ವೆ ಸಚಿವರು ಸೂಚನೆ ನೀಡಿದ ಹಿನ್ನಲೆಯಲ್ಲಿ ಗುರುವಾರ ರೈಲ್ವೆ ಇಲಾಖೆ ಅಧಿಕಾರಿಗಳ ತಂಡ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿತು.
ಮೇ 18ರಿಂದ ರೈಲು ಸಂಚಾರ ಅರಂಭವಾಗುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ ರೈಲ್ವೆ ಸಚಿವರು ರೈಲುಗಳ ಓಡಾಟವನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದರೂ ಅಧಿಕಾರಿಗಳ ತಂಡ ರೈಲು ಸ್ಥಗಿತಕ್ಕೆ ಅನುಮತಿ ನೀಡದೆ ಕಾಮಗಾರಿ ನಡೆಸಲು ಅನುಕೂಲವಾಗುವಂತೆ ಬದಲಿ ಮಾರ್ಗಗಳ ಕುರಿತು ಚಿಂತನೆ ನಡೆಸಿತು.
ಸಂಸದ ಎ.ನಾರಾಯಣಸ್ವಾಮಿ, ನೈರುತ್ಯ ವಲಯ ರೈಲ್ವೆ ಜನರಲ್ ಮ್ಯಾನೆಜರ್ ಅಜಯಕುಮಾರ್ ಸಿಂಗ್ ಭದ್ರಾ ಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ರಾಘವನ್ ನೇತೃತ್ವದಲ್ಲಿ ರೈಲ್ವೆ ಅಧಿಕಾರಿಗಳ ತಂಡ ಅಂಡರ್ ಪಾಸ್ ಕಾಮಗಾರಿಯ ಅರಂಭ ಹಾಗೂ ಅಜ್ಜಂಪುರ-ಶಿವನಿ ಮಾರ್ಗದ ರೈಲುಗಳ ಸಂಚಾರ ಮುಂದುವರೆಇಸುವುದು ಸೇರಿ ಹಲವಾರು ವಿಷಯಗಳ ಕುರಿತು ಸುದಿರ್ಘ ಚರ್ಚೆ ನಡೆಸಿತು.
ಅಜ್ಜಂಪುರ-ಶಿವನಿ ಮಾರ್ಗದ ರೈಲುಗಳನ್ನು ನಿಲ್ಲಿಸುವುದು ಸಾಧ್ಯವಿಲ್ಲ. ಅದರೆ, ಸಚಿವರು ಹಾಗೂ ಸಂಸದರ ಅದೇಶದಂತೆ ಅಂಡರ್ ಪಾಸ್ ಕಾಮಗಾರಿ ನಡೆಸಲು ಸಾಧ್ಯವಾಗುವಂತೆ ಕಾಮಗಾರಿ ಸ್ಥಳದಲ್ಲಿ ಹಾದು ಹೋಗಿರುವ ಜೋಡಿ ರೈಲು ಮಾರ್ಗದ ಜತೆಗೆ ಪಕ್ಕದಲ್ಲಿ ಹೊಸದಾಗಿ ಸಿಂಗಲ್ ರೈಲು ಮಾರ್ಗವನ್ನು ನಿರ್ಮಿಸಿ ರೈಲುಗಳ ಓಡಾಟಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಿತು.
ಒಂದು ತಿಂಗಳ ಅವಧಿಯೊಳಗೆ ಕಾಮಗಾರಿ ಅರಂಭಕ್ಕೆ ಅವಕಾಶ ಮಾಡಿಕೊಡುವ ರೈಲ್ವೆ ಅಧಿಕಾರಿಗಳ ಭರವಸೆ ಮೇರೆಗೆ ಅಂಡರ್ ಪಾಸ್ ಕಾಮಗಾರಿ ಅರಂಭಕ್ಕೆ ಪೂರಕವಾಗಿ ನಡೆಯಬೇಕಾಗಿದ್ದ ಕಾಮಗಾರಿ ಸ್ಥಳದಲ್ಲಿರುವ ಮಣ್ಣು ಮತ್ತು ಕಾಲುವೆಯಲ್ಲಿ ತುಂಬಿರುವ ನೀರನ್ನು ಹೊರಗೆ ಹಾಕುವ ಕಾಮಗಾರಿಯನ್ನು ಗುತ್ತಿಗೆದಾರರು ಅರಂಭಿಸಿದರು.
ರೈಲ್ವೆ ಅಧಿಕಾರಿಗಳ ತಂಡದಲ್ಲಿ ಹುಬ್ಬಳಿ ನೈರುತ್ಯ ರೈಲ್ವೆ ವಲಯದ ಪ್ರಧಾನ ಮುಖ್ಯ ವ್ಯವಸ್ಥಾಪಕ ಎಚ್.ಎಸ್.ವರ್ಮಾ, ಸಿಗ್ನಲ್ ಅಂಡ್ ಟೆಲಿಕಾಮ್ಯನಿಕೆಷನ್ ಮುಖ್ಯ ಇಂಜಿನಿಯರ್ ಎಸ್.ಕೆ.ಗೋಯಲ್, ಮೈಸೂರು ವಿಭಾಗದ ಡಿಆರ್‌ಎಂ ಅಪರ್ಣಾ ಗರ್ಗ್, ವಿಭಾಗಿಯ ಮ್ಯಾನೆಜರ್ ಶ್ರೀನಿವಾಸ್, ವಿಭಾಗಿಯ ಹಿರಿಯ ಇಂಜಿನಿಯರ್ ಕೆ.ರವಿಚಂದ್ರನ್, ವಿಭಾಗೀಯ ಇಂಜಿನಿಯರ್ ವೆಂಕಟೇಶ್ವರಲು, ಸಿಗ್ನಲ್ ಅಂಡ್ ಟೆಲಿಕಾಮ್ಯನಿಕೆಷನ್ ಮುಖ್ಯ ಇಂಜಿನಿಯರ್ ಶ್ರೀನಿವಾಸ್, ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕ ಆರ್.ಸತೀಶ್ ಇದ್ದರು.
ಸಂಸದ ಎ.ನಾರಾಯಣಸ್ವಾಮಿ ಹೇಳಿಕೆ: ಕಾಮಗಾರಿ ಸ್ಥಳದಲ್ಲಿ ಸಿಂಗಲ್ ಲೈನ್ ನಿರ್ಮಿಸುವುದು ತಡವಾಗಲಿದೆ. ಈಗಾಗಲೇ ಕಾಮಗಾರಿ ನಡೆಸಲು ಬಹಳ ಸಮಯ ವ್ಯರ್ಥವಾಗಿದೆ. ಸಿಂಗಲ್ ಲೈನ್ ನಿರ್ಮಿಸುವ ಯೋಜನೆ ಕೈಬಿಟ್ಟು ಅಂಡರ್ ಪಾಸ್ ಮೇಲೆ ರೈಲುಗಳ ಸಂಚಾರದ ವೇಳೆಯೇ ಕಾಮಗಾರಿ ನಡೆಸಲು ಅನುಕೂಲವಾಗುವಂತಹ ಬದಲಿ ಸಾಧ್ಯತೆಗಳ ಕುರಿತು ರೈಲ್ವೇ ಅಧಿಕಾರಿಗಳು ಚಿಂತಿಸಿ ಶುಕ್ರವಾರ ಅಂತಿಮಗೊಳಿಸಬೇಕು. ಹತ್ತು ದಿನದಲ್ಲಿ ಕಾಮಗಾರಿ ಮುಗಿಸಬೇಕು. ಕಾಮಗಾರಿ ಮುಗಿಯುವರಗೆ ಪ್ರತಿ ಎರಡು ದಿನಗಳಿಗೊಮ್ಮೆ ಕಾಮಗಾರಿ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಗುವುದು.