ಶ್ರೀರಾಂಪುರದಲ್ಲಿ ಫ್ಲೂ ಚಿಕಿತ್ಸಾ ಕೇಂದ್ರ

HSD shasakara beti 02 file-2
Published on

ಹೊಸದುರ್ಗ: ತಾಲೂಕಿನ ಶ್ರೀರಾಂಪುರದ ಜ್ಞಾನ ಪ್ರಕಾಶ ಶಾಲಾ ಆವರಣದಲ್ಲಿ ಫ್ಲೂ ಚಿಕಿತ್ಸಾ ಕೇಂದ್ರ ತೆರೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಿಳಿಸಿದರು.

ಕರೊನಾ ವೈರಸ್ ತಡೆಗೆ ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತು ತಾಲೂಕಿನ ಶ್ರೀರಾಂಪುರದಲ್ಲಿ ಗುರುವಾರ ಪರಿಶೀಲನೆ ನಡೆಸಿ ಮಾತನಾಡಿದರು.

ಗ್ರಾಮದ ಬಸ್ ನಿಲ್ದಾಣದಲ್ಲಿ ಫ್ಲೂ ಚಿಕಿತ್ಸಾ ಕೇಂದ್ರ ತೆರೆಯಲು ಅಧಿಕಾರಿಗಳು ಸ್ಥಳ ನಿಗದಿ ಮಾಡಿದ್ದರು. ಆದರೆ, ಅದು ಜನನಿಬಿಡ ಸ್ಥಳದಿಂದ ದೂರವಿರಬೇಕೆಂಬ ಉದ್ದೇಶದಿಂದ ಜ್ಞಾನ ಪ್ರಕಾಶ ಶಾಲೆ ಆವರಣದಲ್ಲಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಮುರಾರ್ಜಿ ಶಾಲೆಯಲ್ಲಿ ಐಸೋಲೇಷನ್ ಸೆಂಟರ್ ತೆರೆಯಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ತಿಪ್ಪೇಸ್ವಾಮಿ, ತಾಪಂ ಇಒ ಜಾನಕಿ ರಾಮ್, ಸಿಪಿಐ ಫೈಜುಲ್ಲಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net