ಕೆರೆಗಳಿಗೆ ಭದ್ರೆ ನೀರು ತುಂಬಿಸುವ ಸಂಕಲ್ಪ

hsd ganarajyotsava 26 p2
Published on

ಹೊಸದುರ್ಗ: ಪ್ರತಿಯೊಬ್ಬರು ಸಂವಿಧಾನದ ಆಶಯ ಅರ್ಥ ಮಾಡಿಕೊಂಡರೆ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ ಎಂದು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಹೇಳಿದರು.

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನವ ಹೊಸದುರ್ಗ ನಿರ್ಮಾಣದ ಉದ್ದೇಶದಿಂದ ಲಿಂಕ್ ರಸ್ತೆ ನಿರ್ಮಿಸಲು 12 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಎಲ್ಲ ಕೆರೆಗಳನ್ನು ತುಂಬಿಸಲು ಸಂಕಲ್ಪ ಮಾಡಲಾಗಿದೆ. ಜನರು ನೀಡಿರುವ ಅಧಿಕಾರವನ್ನು ಅವರ ಹಿತಕ್ಕೆ ಬಳಸುತ್ತೇನೆ ಎಂದರು.

ಬಯಲು ಸೀಮೆಯ ಜನರ ಹಲವು ವರ್ಷಗಳ ಕನಸಾಗಿದ್ದ ಭದ್ರಾ ನೀರು ತಾಲೂಕಿಗೆ ಹರಿದು ಬಂದಿದ್ದು, ವಾಣಿ ವಿಲಾಸ ಸಾಗರದಲ್ಲಿ ಹೆಚ್ಚಿನ ನೀರು ಸಂಗ್ರಹಣೆಯಾಗಿದೆ. ಈ ಬಾರಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಉತ್ತಮ ಬೆಳೆ ಬಂದಿದೆ ಎಂದು ತಿಳಿಸಿದರು.

ತಹಸೀಲ್ದಾರ್ ತಿಪ್ಪೇಸ್ವಾಮಿ ಮಾತನಾಡಿ, ಪ್ರತಿಯೊಬ್ಬರು ಸಂವಿಧಾನದ ಮಹತ್ವ ತಿಳಿದುಕೊಳ್ಳುವ ಜತೆಗೆ ಅದಕ್ಕೆ ಬದ್ಧವಾಗಿ ಬದುಕಬೇಕು ಎಂದರು.

ಪುರಸಭೆಯ ಕಂದಾಯ ಅಧಿಕಾರಿ ಅಜಗರ್ ಅಲಿ, ಬಿಇಒ ಎಲ್.ಜಯಪ್ಪ, ಇಂದಿರಾ ಗಾಂಧಿ ಬಿಎಡ್ ಕಾಲೇಜಿನ ಪ್ರಾಂಶುಪಾಲ ಡಾ.ಟಿ.ಬಸಪ್ಪ ಅವರಿಗೆ ನಾಗರಿಕ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ್, ಸದಸ್ಯ ಅಜ್ಜಪ್ಪ, ತಾಪಂ ಅಧ್ಯಕ್ಷೆ ಸುಮಿತ್ರಾ, ಇಒ ಜಾನಕೀರಾಮ್, ಸಿಪಿಐ ಫೈಜುಲ್ಲಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net