9 ಕುಟುಂಬಕ್ಕೆ ಆಹಾರ ಧಾನ್ಯ ಪೂರೈಕೆ

HSD phone in palashruthi 20 file-3
Published on

ಹೊಸದುರ್ಗ: ಶಾಸಕ ಗೂಳಿಹಟ್ಟಿ ಡಿ.ಶೇಖರ್ ತಾಲೂಕಿನ ಹೊನ್ನೇನಹಳ್ಳಿಯ 9 ಕುಟುಂಬಗಳಿಗೆ ಸೋಮವಾರ ಪಡಿತರ ವ್ಯವಸ್ಥೆ ಮಾಡಿದ್ದಾರೆ.

ವಿಜಯವಾಣಿ ಶನಿವಾರ ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಸಕರಿಗೆ ಹೊನ್ನೇನ ಹಳ್ಳಿಯ ಮಾರುತಿ ಎಂಬುವರು ರೇಷನ್ ಕಾರ್ಡ್ ಇಲ್ಲದ ಕುಟುಂಬಗಳಿಗೆ ಪಡಿತರ ಸಿಗುತ್ತಿಲ್ಲ ಎಂದು ಗಮನ ಸೆಳೆದಿದ್ದರು.

ಇದಕ್ಕೆ ಸ್ಪಂದಿಸಿದ ಶಾಸಕರು, ಸಮಸ್ಯೆ ಇತ್ಯರ್ಥಕ್ಕೆ ತಾಲೂಕು ಆಡಳಿತಕ್ಕೆ ಸೂಚಿಸಿದ್ದರು. ಸೋಮವಾರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್ ತಿಪ್ಪೇಸ್ವಾಮಿ ಆಹಾರ ಧಾನ್ಯ ಪೂರೈಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net