ಕಿರಾಣಿ ಅಂಗಡಿ ಪರವಾನಗಿ ರದ್ದತಿ

HSD korona notis 20 file-1
Published on

ಹೊಸದುರ್ಗ: ಕರೊನಾ ತಡೆಗೆ ಸರ್ಕಾರ ಜಾರಿಗೊಳಿಸಿರುವ ನಿಯಮ ಪಾಲಿಸದೆ ವ್ಯಾಪಾರ ನಡೆಸುತ್ತಿದ್ದ ಪಟ್ಟಣದ ಎರಡು ಸೂಪರ್ ಬಜಾರ್ ಸೇರಿ 5 ಕಿರಾಣಿ ಅಂಗಡಿ ಮಾಲೀಕರಿಗೆ ಸೋಮವಾರ ಪುರಸಭೆ ಅಧಿಕಾರಿಗಳು, ವ್ಯಾಪಾರ ಪರವಾನಿಗೆ ರದ್ದುಗೊಳಿಸುವ ನೋಟಿಸ್ ನೀಡಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಮುಂಜಾನೆ 6ರಿಂದ 9ರ ವರೆಗೆ ಅಂಗಡಿಗಳನ್ನು ತೆರೆದು ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಅಂಗಡಿ ಮಾಲೀಕರು ಹಾಗೂ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸುವ ಜತೆಗೆ ಸ್ಯಾನಿಟೈಸರ್ ಬಳಸಿ ಸಾಮಗ್ರಿ ನೀಡುವಂತೆ ಆದೇಶ ನೀಡಲಾಗಿತ್ತು.

ಸೋಮವಾರ ಮುಂಜಾನೆ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು ನೇತೃತ್ವದ ಅಧಿಕಾರಿಗಳ ತಂಡ, ಕರೊನಾ ತಡೆ ನಿಯಮ ಪಾಲಿಸುತ್ತಿರುವ ಬಗ್ಗೆ ಪರಿಶೀಲನೆ ನಡೆಸಿತು. ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳದ, ಮಾಸ್ಕ್ ಧರಿಸದ 5 ಅಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net