ಅಂಬೇಡ್ಕರ್ ನವ ಭಾರತದ ನಿರ್ಮಾತೃ

hsd ambedkar jayanthi 14 p1
Published on

ಹೊಸದುರ್ಗ: ಸಮ ಸಮಾಜ ನಿರ್ಮಾಣಕ್ಕೆ ಪೂರಕವಾದ ಸಂವಿಧಾನ ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ನವ ಭಾರತದ ನಿರ್ಮಾತೃ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್ ಹೇಳಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಮಂಗಳವಾರ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ನಡೆಯಬೇಕು ಎಂದ ಅವರು, ಪೌರ ಕಾರ್ಮಿಕರನ್ನು ಗೌರವಿಸುವ ಮೂಲಕ ಜಯಂತ್ಯುತ್ಸವಕ್ಕೆ ನೈಜ ಅರ್ಥ ಕಲ್ಪಿಸಲಾಗಿದೆ ಎಂದು ಶ್ಲಾಘಿಸಿದರು.

ಪುರಸಭೆ ಸದಸ್ಯ ಆರ್.ಡಿ. ಪ್ರಶಾಂತ್, ರಾಮಚಂದ್ರಪ್ಪ, ಯಾದವ ಸಮಾಜದ ಅಧ್ಯಕ್ಷ ಸಿ. ಧನಂಜಯ, ನಾಯಕ ಸಮಾಜದ ಅಧ್ಯಕ್ಷ ತುಂಬಿನಕೆರೆ ಬಸವರಾಜ್, ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ, ಬಿಜೆಪಿ ಕಾರ್ಯದರ್ಶಿ ಶಿವನಕಟ್ಟೆ ಶಶಿ, ಮನೋಜ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net