ಹೊಸದುರ್ಗದಲ್ಲಿ ಅಭೂತಪೂರ್ವ ಬೆಂಬಲ

HSD BAND may 24-2020 (1)
Published on

ಹೊಸದುರ್ಗ: ಒಂದು ದಿನದ ಕರ್ಪ್ಯೂಗೆ ಹೊಸದುರ್ಗ ತಾಲೂಕಿನಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು.

ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸರಳ ವಿವಾಹ ಹೊರತುಪಡಿಸಿ ಭಾನುವಾರ ಎಲ್ಲ ಚಟುವಟಿಕೆಗಳು ಬಂದ್ ಆಗಿದ್ದವು.

ನಿತ್ಯ ಜನರಿಂದ ಕೂಡಿರುತ್ತಿದ್ದ ಐ.ಬಿ.ವೃತ್ತ, ತಾಲೂಕು ಕಚೇರಿ, ಬಸ್ ನಿಲ್ದಾಣ ಸೇರಿ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪ್ರಮುಖ ವೃತ್ತಗಳಲ್ಲಿ ವಾಹನಗಳ ಸಂಚಾರ ತಡೆಗೆ ಬ್ಯಾರಿಕೇಡ್ ಹಾಕಲಾಗಿತ್ತು. ಬಸ್, ಲಾರಿ, ಗೂಡ್ಸ್ ಗಾಡಿ, ಆಟೋ, ಬೈಕ್ ಸೇರಿ ಯಾವ ವಾಹನಗಳೂ ರಸ್ತೆಗೆ ಇಳಿದಿರಲಿಲ್ಲ.

ಎಂದಿನಂತೆ ಬೆಳಗ್ಗೆ ತರಕಾರಿ, ಹಾಲು, ಹಣ್ಣು, ದಿನಸಿ ಖರೀದಿ ನಡೆದಿತ್ತು. ಮಧ್ಯಾಹ್ನದ ಹೊತ್ತಿಗೆ ಅಗತ್ಯ ಅಂಗಡಿಗಳೂ ಬಂದ್ ಆಗಿದ್ದರಿಂದ ಇಡೀ ಪಟ್ಟಣವೇ ಬಣಗುಡುತ್ತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net