ಕಸಾಯಿಖಾನೆ ಸೇರುತ್ತಿದ್ದ ಹಸು, ಕರು ರಕ್ಷಣೆ

HSD AKRAMA 31 (2)
Published on

ಹೊಸದುರ್ಗ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಿಂದ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ 3 ಹಸು ಹಾಗೂ 16 ಕರುಗಳನ್ನು ವಾಹನ ಸಮೇತ ಹಿಡಿದ ಭಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ನಡೆದ ದನದ ಸಂತೆಯಲ್ಲಿ ಖರೀದಿಸಿದ್ದ 3 ಹಸುಗಳು ಹಾಗೂ 16 ಕರುಗಳನ್ನು ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ತುಂಬಿ ಹುಳಿಯಾರು ಕಡೆಗೆ ಸಾಗಿಸಲಾಗುತ್ತಿತ್ತು.

ಕಸಾಯಿಖಾನೆ ಹಸುಗಳನ್ನು ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಗುರುವಾರ ಸಂಜೆ ಕಾರ್ಯಚರಣೆಗಿಳಿದ ಭಜರಂಗದಳದ ಕಾರ್ಯಕರ್ತರು, ಎಪಿಎಂಸಿ ಮಾರುಕಟ್ಟೆ ಬಳಿ ವಾಹನ ತಡೆದು ಹಸುಗಳನ್ನು ವಶಪಡಿಸಿಕೊಂಡು ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ.

ಹೊಸದುರ್ಗ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಹಸು ಮತ್ತು ಕರುಗಳನ್ನು ಗೋಶಾಲೆಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net