ಸುಜ್ಞಾನ ಸಂಪಾದಿಸಿದರೆ ಉತ್ತಮ ಸಾಧನೆ

HSD sujnana sangama 11 file-1
Published on

ಹೊಸದುರ್ಗ: ಜನರು ಜ್ಞಾನದೊಂದಿಗೆ ಸುಜ್ಞಾನ ಸಂಪಾದಿಸಿದರೆ ಮಾತ್ರ ಬದುಕಿನಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕುಂಚಿಟಿಗ ಮಠದಲ್ಲಿ ಗುರುವಾರ ಆಯೋಜಿಸಿದ್ದ ಸುಜ್ಞಾನ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸುಜ್ಞಾನವು ಮನುಷ್ಯನ ಬದುಕಿನ ಕೊಳೆಯನ್ನು ತೊಳೆಯುತ್ತದೆ ಎಂದರು.

ಶಿವಮೊಗ್ಗ ಬಸವ ಕೇಂದ್ರದ ಶ್ರೀ ಬಸವ ಮುರುಳಸಿದ್ದ ಸ್ವಾಮೀಜಿ ಮಾತನಾಡಿ, ವಚನಗಳು ಅಲೌಕಿಕವಾದ ಆಧ್ಯಾತ್ಮಿಕ ಪರಮಾನಂದವನ್ನು ಬದುಕಿಗೆ ನೀಡುವ ಶಕ್ತಿ ಹೊಂದಿವೆ ಎಂದು ತಿಳಿಸಿದರು.

ಶ್ರೀ ಶಾಂತವೀರ ಸ್ವಾಮೀಜಿ, ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಸ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net