ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ

hsd madadakere jatre 15 p2
Published on

ಹೊಸದುರ್ಗ: ತಾಲೂಕಿನ ಮಾಡದಕೆರೆ ಗ್ರಾಮದಲ್ಲಿ ಭಾನುವಾರ ಶ್ರೀ ಕದಿರಿ ಲಕ್ಷ್ಮೀ ನರಸಿಂಹಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಉತ್ಸವದ ಪೂರ್ವಭಾವಿಯಾಗಿ ದೇವಾಲಯದಲ್ಲಿ ವಿಶೇಷ ಪೂಜೆ ಕಾರ್ಯಕ್ರಮ ಜರುಗಿದವು. ಶನಿವಾರ ದೇವಾಲಯದಲ್ಲಿ ಧ್ವಜಾರೋಹಣ, ಹೊಳೆಪೂಜೆ, ದೇವರು ಆಗಮನ, ಧೂಪ ಸೇವೆ ನಡೆಯಿತು.

ಸಂಜೆ ಶ್ರೀ ಆಂಜನೇಯ ಸ್ವಾಮಿ, ಭೂತರಾಯ ಸ್ವಾಮಿ ಹಾಗೂ ಅಂಬಾ ಭವಾನಿ ಅಮ್ಮನವರ ಕೂಡು ಭೇಟಿ ಕಾರ್ಯಕ್ರಮ ಹಾಗೂ ರಾಜಬೀದಿ ಉತ್ಸವ ನೆರವೇರಿತು.

ಭಾನುವಾರ ಮುಂಜಾನೆಯಿಂದ ದೇವಾಲಯದಲ್ಲಿ ಹೋಮ ಹಾಗೂ ಕಳಸಾರೋಹಣ ಮತ್ತಿತರ ಕಾರ್ಯಕ್ರಮಗಳು ನಡೆದವು. ನಂತರ ದೇವರನ್ನು ಉತ್ಸವದ ಮೂಲಕ ಕರೆತಂದು ರಥಾರೋಹಣ ಮಾಡಲಾಯಿತು. ಅನುರಾಧ ನಕ್ಷತ್ರದ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನೆರವೇರಿಸಲಾಯಿತು. ಭಕ್ತರು ರಥಕ್ಕೆ ಬಾಳೆಹಣ್ಣು ತೂರಿ ಭಕ್ತಿ ಅರ್ಪಿಸಿದರು.

ವಿವಿಧ ಹೂಮಾಲೆಗಳಿಂದ ರಥವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿತ್ತು. ಸಿಂಗಾಪುರ, ಮಾಡದಕೆರೆ, ಆವಿನಹಟ್ಟಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net