ಹೊಸದುರ್ಗದಲ್ಲಿ ಮಳೆಗೆ ಬೆಳೆ ಹಾನಿ

HSD RAIN 09 (1)
Published on

ಹೊಸದುರ್ಗ: ತಾಲೂಕಿನಲ್ಲಿ ಬುಧವಾರ ಬಿರುಗಾಳಿ ಸಹಿತ ಸುರಿದ ಆಲೀಕಲ್ಲು ಮಳೆಗೆ ಅಪಾರ ಬೆಳೆ ಹಾನಿ ಸಂಭವಿಸಿದೆ.

ತೆಂಗು ಮತ್ತು ಅಡಕೆ ಮರಗಳು ಮುರಿದು ಬಿದಿದ್ದು, ಬಾಳೆ ತೋಟಗಳು ಸಂಪೂರ್ಣ ಹಾನಿಗೊಳಗಾಗಿವೆ. ರಾತ್ರಿ ಸುರಿದ ಮಳೆಗೆ ಮಾಡದಕೆರೆ ಹೋಬಳಿಯ ಕೆಂಕೆರೆ, ಶಿರನಕಟ್ಟೆ, ಎಂ.ಮಲ್ಲಾಪುರ, ಬೇವಿನಹಳ್ಳಿ, ಮಾಳಿಗೆಹಟ್ಟಿ, ಅತ್ತಿಮಗ್ಗೆ ಗ್ರಾಮಗಳಲ್ಲಿ ಬಾಳೆ ಬೆಳೆ ನೆಲಕಚ್ಚಿದೆ. ಮಾಡದಕೆರೆ, ಶ್ರೀರಾಮಪುರದಲ್ಲಿ ತೆಂಗು ಮತ್ತು ಬಾಳೆ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ.

ಕಸಬಾ ಹೋಬಳಿಯ ಹುಣವಿನಡು ಗ್ರಾಮದಲ್ಲಿ ಮನೆಯೊಂದರ ಶೀಟುಗಳು ಗಾಳಿಗೆ ಹಾರಿ ಹೋಗಿದೆ.

ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಸೀಲ್ದಾರ್ ತಿಪ್ಪೇಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಸುರಿದ ಮಳೆಗೆ ಶ್ರೀರಾಂಪುರ ಹಾಗೂ ಮಾಡದಕೆರೆ ಹೋಬಳಿಯಲ್ಲಿ ಬಾಳೆ ಬೆಳೆಗೆ ಹೆಚ್ಚಿನ ಹಾನಿಯಾಗಿದೆ. ಈ ಕುರಿತು ವಿವರವಾದ ವರದಿಯನ್ನು ಸರ್ಕಾರಕ್ಕೆ ರವಾನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net