ಹಕ್ಕುಪತ್ರ ವಿತರಣೆಗೆ ಹೊಸಬೀರ್ವಾಳು ಗ್ರಾಮಸ್ಥರ ಆಗ್ರಹ

24 SARAG 2
filter: 0; fileterIntensity: 0.000000; filterMask: 0; captureOrientation: 0; hdrForward: 6; shaking: 0.020037; highlight: 1; algolist: 0; multi-frame: 1; brp_mask: 8; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 7864320;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38;
Published on

ಸರಗೂರು: ರಾಜ್ಯ ಸರ್ಕಾರ ನೀಡಿರುವ ನಿವೇಶನಗಳಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಹಕ್ಕು ಪತ್ರ ನೀಡಲು ಸತಾಯಿಸುತ್ತಿದೆ ಎಂದು ಆರೋಪಿಸಿ ತಾಲೂಕಿನ ಹೊಸ ಬೀರ್ವಾಳು ಗ್ರಾಮಸ್ಥರು ತಾಲೂಕು ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ವಿಜಯಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾವೇಶದಲ್ಲಿ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರು ಮುತುವರ್ಜಿ ವಹಿಸಿ ಸಾಂಕೇತಿಕವಾಗಿ ಹಕ್ಕು ಪತ್ರಗಳನ್ನು ವಿತರಿಸಿದ್ದಾರೆ. ಅದರಲ್ಲಿ ಸರಗೂರು ತಾಲೂಕಿನ ಹೊಸಬೀರ್ವಾಳು ಗ್ರಾಮದ 120 ಹಕ್ಕುಪತ್ರಗಳು ಸಹ ಒಳಗೊಂಡಿದೆ. ಸರ್ಕಾರದ ಅಧಿಕಾರಿಗಳ ಪ್ರಕಾರ ಈಗಾಗಲೇ ನಮಗೂ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ ಹಕ್ಕು ಪತ್ರಗಳು ಗ್ರಾಮದ ಜನರಿಗೆ ತಲುಪಿಲ್ಲ. ವಿಜಯಪುರದಲ್ಲಿ ನಡೆಯುವ ಸಮಾವೇಶದಲ್ಲಿ ಹಕ್ಕುಪತ್ರ ವಿತರಿಸಲಾಗುತ್ತದೆ ಎಂದು ಹೇಳಲಾಗಿತ್ತು. ನಂತರ ಆ.15 ಸ್ವಾತಂತ್ರೃ ದಿನಾಚರಣೆ ಸಮಾರಂಭದಲ್ಲಿ ಹಕ್ಕುಪತ್ರ ವಿತರಿಸುತ್ತೇವೆ, ಗ್ರಾಮಸ್ಥರೆಲ್ಲ ಬನ್ನಿ ಎಂದು ಕರೆದಿದ್ದರು. ಅಂದೂ ವಿತರಣೆ ಮಾಡಲಿಲ್ಲ. ಸೆ.13 ರಂದು ಶಾಸಕರ ನೇತೃತ್ವದಲ್ಲಿ ಹಕ್ಕುಪತ್ರ ನೀಡುತ್ತೇವೆ ಬನ್ನಿ ಎಂದಿದ್ದರು. ಅಲ್ಲೂ ವಿತರಣೆ ಮಾಡಿಲ್ಲ. ಅ.24 ರಂದು ಶಾಸಕರ ಜನಸ್ಪಂದನ ಕಾರ್ಯಕ್ರಮವಿದೆ ಎಲ್ಲರೂ ಬನ್ನಿ, ಹಕ್ಕುಪತ್ರಗಳನ್ನ ವಿತರಿಸುತ್ತೇವೆ ಎಂದಿದ್ದರು. ಇದೀಗ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವದಂದು ವಿತರಣೆ ಮಾಡುತ್ತೇವೆ ಎಂದು ಮಾಹಿತಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾಜಿಕ ಹೋರಾಟಗಾರ ಗ್ರಾಮೀಣ ಮಹೇಶ್, ಗ್ರಾಮದ ಮುಖಂಡರಾದು ಚನ್ನನಾಯಕ, ಮಹಲಿಂಗ, ಮಹದೇವಶಟ್ಟಿ, ಚಿಕ್ಕಶಟ್ಟಿ, ಗೋಪಾಲಾಚಾರಿ, ಶಿವಕುಮಾರ್, ನಿಂಗಮ್ಮ, ಲಕ್ಷ್ಮಮ್ಮ, ಜಯಪ್ಪ ಸೇರಿದಂತೆ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net