ಹೊಸಬೇಂಗ್ರೆ ಕಡಲ್ಕೊರೆತ ತೀವ್ರ : ಕಡಲಕಿನಾರೆಯಲ್ಲಿ ಮಡಿ ; ಭಾರಿ ಪ್ರಮಾಣದ ಕಸದ ರಾಶಿ

kadalkoreta
ಸಮುದ್ರ ತಟದಲ್ಲಿ ಭಾರಿ ಪ್ರಮಾಣದಲ್ಲಿ ಕಸದ ರಾಶಿ ಹಾಗೂ ಮಡಿ ಬಿದ್ದಿರುವುದು.
Published on

ವಿಜಯವಾಣಿ ಸುದ್ದಿಜಾಲ ಕೋಟ
ಕೋಡಿ ಗ್ರಾಪಂ ಕೋಡಿ ಕನ್ಯಾಣ, ಹೊಸಬೇಂಗ್ರೆ ಕಡಲ ಸಮುದ್ರತಟಗಳು ಕಡಲ್ಕೊರೆತಕೀಡಾಗುತ್ತಿದ್ದು, ಈ ಪ್ರದೇಶದಲ್ಲಿ ಮಡಿ ಬಿದ್ದ ಹಿನ್ನೆಲೆಯಲ್ಲಿ ಸಮುದ್ರ ತಟದಲ್ಲಿ ಭಾರಿ ಪ್ರಮಾಣದಲ್ಲಿ ಕಸದ ರಾಶಿ ಸೃಷ್ಟಿಸಿದೆ.

ಪ್ರತಿ ವರ್ಷ ಮಳೆಗಾಲದಲ್ಲಿ ಕರಾವಳಿ ಕೆಲವು ಭಾಗಗಳಲ್ಲಿ ಮಡಿ ಬಿಳುವ ಸನ್ನಿವೇಶ ಇದೆ. ಅದರಂತೆ ಕೋಡಿ ಹೊಸಬೇಂಗ್ರೆಯಿಂದ ಕುಂದಾಪುರ ಕೋಡಿವರೆಗೆ ಒಂದೊಂದು ಭಾಗದಲ್ಲಿ ಮಡಿ ಬಿಳುವ ವಾಡಿಕೆ ಸೃಷ್ಟಿಯಾಗುತ್ತದೆ, ಇದರಿಂದ ಈ ಭಾಗದಲ್ಲಿ ಮೀನುಗಾರರು ಹೆಚ್ಚು ಪ್ರಮಾಣದಲ್ಲಿ ಮೀನು ಹಿಡಿಯುವ ಕೇಂದ್ರವಾಗಿರಿಸಿಕೊಳ್ಳುತ್ತಾರೆ.

ರಸ್ತೆ ಸಮುದ್ರದಲ್ಲಿ ಲೀನ: ಕೋಡಿ ಗ್ರಾಪಂ ವ್ಯಾಪ್ತಿಯ ಹೆಚ್ಚಿನ ಭಾಗಗಳಲ್ಲಿ ಮಡಿ ಬಿದ್ದಿದ್ದು, ಅದರಂತೆ ಕೋಡಿ ಹೊಸಬೇಂಗ್ರೆ ಲೈಟ್ ಹೌಸ್ ಬಳಿ ರಸ್ತೆ ಕೆಲವರ್ಷಗಳಿಂದ ಸಮುದ್ರದಲ್ಲಿ ಲೀನವಾಗುತ್ತಿದೆ, ಈ ದಿಸೆಯಲ್ಲಿ ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಭಾರಿ ಕಡಲ್ಬರಕ್ಕೆ ಇಲ್ಲಿನ ಈ ರಸ್ತೆ ಸಮುದ್ರದಲ್ಲಿ ಕೊಚ್ಚಿ ಹೋಗುತ್ತಿವೆ.

ಕೋಡಿ ಹೊಸಬೇಂಗ್ರೆಯಲ್ಲಿ ಕಳೆದೆರಡು ವರ್ಷಗಳಿಂದ ಮಡಿ ಬಿಳುತ್ತಿದೆ. ಇದರಿಂದ ಕಡಲ್ಕೊರೆತ ಪ್ರಮಾಣ ಅಲ್ಪ ನಿರಾಳತೆ ಕಂಡಿದ್ದೇವೆ, ಆದರೆ ಇಲ್ಲಿ ಮಡಿ ಬಿದ್ದ ಸ್ಥಳದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಭಾರಿ ಪ್ರಮಾಣದಲ್ಲಿದೆ ಒಂದಿಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬಾರಿ ಗಾತ್ರದ ಲಾರಿಯಲ್ಲಿ ಕೊಂಡ್ಯೊಯ್ದಿದ್ದಾರೆ.-ಅಣ್ಣಪ್ಪ ಕುಂದರ್, ಕೋಡಿ ಹೊಸಬೇಂಗ್ರೆ ನಿವಾಸಿ

ಸಮುದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯದ ರಾಶಿ ದಿನಂಪ್ರತಿ ಸಮುದ್ರದ ತೆರೆಯ ಮೂಲಕ ಮೇಲೆ ಹಾಕುತ್ತದೆ. ಆದರೆ ನಮ್ಮಂತೆ ಸಾಕಷ್ಟು ಸಂಘಟನೆ ಕಡಲ ಕಿನಾರೆಯಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತೆ ಮೂಲಕ ತೆರವುಗೊಳಿಸುತ್ತಿದೆ. ಇಷ್ಟಾಗಿಯೂ ತ್ಯಾಜ್ಯ ಎಸೆಯುವ ಮನಸ್ಥಿತಿ ಮನುಷ್ಯ ಬದಲಾಯಿಸಿಕೊಳ್ಳಬೇಕಿದೆ. ಪ್ರಕೃತಿ ಉಳಿಸುವ ಕಾಯಕ ಮಾಡದಿದ್ದರೆ ಮನುಕುಲಕ್ಕೆ ಮುಂದೆ ಉಳಿಗಾಲ ಇಲ್ಲವಾಗಿದೆ.-ಅಜಿತ್ ಆಚಾರ್, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net