

ಯರಗೋಳ: ಹೋರುಣಚ ತಾಂಡಾದ ಸಕರ್ಾರಿ ಕಿರಿಯ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳಿಗೆ ಶನಿವಾರ ವಠಾರ' ಶಾಲೆ ಪ್ರಾರಂಭಿಸಲಾಗಿದೆ. 34 ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಶಿಕ್ಷಕರು ಮಕ್ಕಳಿಗೆ ಮಾಸ್ಕ್ ವಿತರಿಸುವುದರ ಜತೆಗೆ ಪರಸ್ಪರ ಅಂತರ ಕಾಯ್ದಕೊಳ್ಳುವಂತೆ ನೋಡಿಕೊಂಡರು.
ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳ ಸಲಹೆ ಮೇರೆಗೆ ಅಂತರ, ಶುಚಿತ್ವ ಕಾಪಾಡಿಕೊಂಡುವಠಾರ' ಶಾಲೆ ಪ್ರಾರಂಭಿಸಲಾಗಿದ್ದು, ಮಕ್ಕಳ ಮೊಗದಲ್ಲಿನ ಮಂದಹಾಸ ಕಂಡು ಸಂತೋಷವಾಗಿದೆ ಎಂದು ಅಲ್ಲಿಪುರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಮಲ್ಲಪ್ಪ ಮ್ಯಾಗೇರಿ ವಿಜಯವಾಣಿಗೆ ತಿಳಿಸಿದರು.
ಮುಖ್ಯಗುರು ಬಸವರಾಜ, ಸಹ ಶಿಕ್ಷಕ ಇಮಾನ್ ವ್ಯಲ್, ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ದಣ್ಣುನಾಯಕ, ಉಪಾಧ್ಯಕ್ಷ ರಾಮುನಾಯಕ, ಸದಸ್ಯರಾದ ಮನ್ನುನಾಯಕ, ಸುಶಿಲಾಬಾಯಿ, ವಸಂತನಾಯಕ, ದಮರ್ುನಾಯಕ, ಸುನೀಲ್ ನಾಯಕ್ ಇತರರಿದ್ದರು. ಯರಗೋಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿಯು 'ವಠಾರ' ಶಾಲೆ ಆರಂಭಗೊಂಡವು. ಮುಖ್ಯಗುರು ಆಶಪ್ಪ, ದೈಹಿಕ ಶಿಕ್ಷಕ ಶಂಕರಗೌಡ, ಸಹ ಶಿಕ್ಷಕರಾದ ಸುಮಾ, ರಾಜೇಶ್ವರಿ, ಕೈರೂನೀಸ ಬೇಗಂ, ವಿಶಾಲಾಕ್ಷಿ, ಕಲ್ಪನ, ಉತ್ತಮ ಇದ್ದರು.