

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಸಂಸ್ಕರಣ ಸಹಕಾರಿ ಸಂಘದ 5 ವರ್ಷಗಳ ಅವಧಿಗೆ ಶನಿವಾರ ನಡೆದ ಚುನಾವಣೆಯಲ್ಲಿ 12 ನಿರ್ದೇಶಕ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರೇ ಜಯಗಳಿಸಿದ್ದಾರೆ.
ಅ ವರ್ಗ ಸ್ಥಾನಕ್ಕೆ ಸಿದ್ದಪ್ಪ ಪ್ಯಾಟಿ, ಎಸ್ಸಿ ಸ್ಥಾನಕ್ಕೆ ಅರ್ಜುನ ಪತ್ರೆಣ್ಣವರ, ಎಸ್ಟಿ ಸ್ಥಾನಕ್ಕೆ ಹಸನಪ್ಪ ತಳವಾರ, ಬ ವರ್ಗಕ್ಕೆ ಬಸವರಾಜ ಮೊರಬ, ಮಹಿಳಾ ಮೀಸಲು ಸ್ಥಾನಕ್ಕೆ ಕವಿತಾ ಘೋರ್ಪಡೆ, ಶಾಂತಾ ಬೇಕ್ವಾಡಕರ, ಸಾಮಾನ್ಯ ಸ್ಥಾನಕ್ಕೆ ಮಂಜುನಾಥ ಹೊರಕೇರಿ, ಉಳವಪ್ಪ ದಾಸನೂರ, ಶಿವಾನಂದ ಮುದ್ದಿ, ಚನ್ನಬಸಪ್ಪ ಸಾಲಿ, ನಿಂಗಪ್ಪ ಬೇಕ್ವಾಡಕರ, ಉಮೇಶ ಭೂಮಣ್ಣವರ ಆಯ್ಕೆಯಾಗಿದ್ದಾರೆ.