ತುಂಬಿ ಹರಿಯುತ್ತಿರುವ ದೇವರನಿಂಬರಗಿ ಹಳ್ಳ

Horti 14-1
Published on

ಹೊರ್ತಿ: ಈ ಭಾಗದಲ್ಲಿ ಸತತ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ- ಕೊಳ್ಳಗಳು ತುಂಬಿ ತುಂಬಿ ಹರಿಯುವ ಮೂಲಕ ರೈತರ ಕೆಲ ಜಮೀನುಗಳು ಜಲಾವೃತಗೊಂಡಿವೆ.

ದೇವರನಿಂಬರಗಿ, ಜಿಗಜೇವಣಿ, ಕಾತ್ರಾಳ, ಇಂಚಗೇರಿ, ಲಮಾನಟ್ಟಿ, ಸಾತಲಗಾಂವ ಗ್ರಾಮಗಳ ಜಮೀನುಗಳಲ್ಲಿ ಬೆಳೆದ ಮೆಕ್ಕೆಜೋಳ, ತೊಗರಿ, ಶೇಂಗಾ, ದ್ರಾಕ್ಷಿ ಸೇರಿ ವಿವಿಧ ಬೆಳೆಗಳು ನೀರಲ್ಲಿ ನಿಂತು ಹಾಳಾಗುತ್ತಿವೆ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ದೇವರನಿಂಬರಗಿಯ ಹಳ್ಳಕ್ಕೆ ವಿಪರೀತ ನೀರು ಬಂದಿದೆ. ಇದರಿಂದ ಹಳ್ಳದ ದಂಡೆಯ ಬೋರ್‌ವೆಲ್‌ಗಳು, ಬಾವಿಗಳಿಗೆ ನೀರು ತುಂಬಿ ರೈತನಿಗೆ ಅನುಕೂಲವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net